ಕೆಎಲ್​ಇ ಪಿಯುಸಿ ಪ್ರಥಮ ವರ್ಷದ ವಿದ್ಯಾಥಿರ್ಗಳಿಗೆ ಓರಿಂಟೇಶನ್​

24GDG02
ಗದಗ ಕೆಎಲ್​ಇ ಪಿಯುಸಿ ಪ್ರಥಮ ವರ್ಷದ ವಿದ್ಯಾಥಿರ್ಗಳಿಗೆ ನಡೆದ ಓರಿಂಟೇಶನ್​ ಕಾರ್ಯಕ್ರಮದಲ್ಲಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಬಸವರಾಜ ಬೊಮ್ಮನಹಳ್ಳಿ, ಸ್​. ವಿ. ಸಂಕನೂರ, ಮಲ್ಲಣ್ಣ ಕೋಳಿ, ಎಸ್​. ಪಿ. ಸಂಶಿಮಠ, ವೀರೇಶ ಕೂಗು, ಅಶೋಕ ನಿಲೂಗಲ, ಪಿ. ಜಿ. ಪಾಟೀಲ. ಎಸ್​. ಬಿ. ಹಾವೇರಿ, ರಾಜೇಶ್ವರಿ ರಾಜೂರ, ಎಸ.ಆರ. ಹಿರೇಗೌಡರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕೆಎಲ್​ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಥಮ ವರ್ಷದ ವಿದ್ಯಾಥಿರ್ಗಳಿಗೆ ಓರಿಯಂಟೇಷನ್​ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್​ಇ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಕೆಎಲ್​ಇ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಬಡ ವಿದ್ಯಾಥಿರ್ಗಳ ಶಿಕ್ಷಣದ ಕನಸನ್ನು ನನಸಾಗಿಸುವ ಸಂಸ್ಥೆಯಾಗಿದೆ. ಈ ಭಾಗದ ಬಡ ಪ್ರತಿಭಾನ್ವಿತ ವಿದ್ಯಾಥಿರ್ಗಳಿಗೆ ಸಹಾಯ ಹಸ್ತ ಚಾಚುವುದರ ಮೂಲಕ ಅನೇಕ ಬಡ ವಿದ್ಯಾಥಿರ್ಗಳ ಬಾಳಿಗೆ ಬೆಳಕಾಗಿ ನಿಂತಿದೆ. ಇಂದಿನ ದಿನಗಳಲ್ಲಿ ಯಾವುದೇ ಕೋರ್ಸುಗಳಲ್ಲಿ ಹೆಚ್ಚು ಕಡಿಮೆ ಎಂಬ ಭೇದವಿಲ್ಲ. ವಿದ್ಯಾಥಿರ್ಗಳಲ್ಲಿ ಪ್ರತಿಭೆ ಕೌಶಲ್ಯಗಳ ಕೊರತೆಯಿಂದಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಇಂದಿನ ದಿನಕ್ಕೆ ತಕ್ಕಂತೆ ನಾವು ಶಿಕ್ಷಣದ ಕೌಶಲ್ಯಗಳನ್ನು ಬದಲಾಯಿಸಿಕೊಂಡು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಅಂತಹ ಬದಲಾವಣೆ ಮಾಡಿಕೊಂಡರೆ ಯಶಸ್ಸು ಶತಸಿದ್ಧ. ಆ ನಿಟ್ಟಿನಲ್ಲಿ ಕೆಎಲ್​ಇ ಸಂಸ್ಥೆಯು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.
ಜಿಮ್ಸ್​ ನಿರ್ದೇಶಕ ಡಾ. ಬಸವರಾಜ ಬೊಬ್ಬನಹಳ್ಳಿ ಮಾತನಾಡಿ, ವಿದ್ಯಾಥಿರ್ಗಳಲ್ಲಿ ಶ್ರದ್ಧೆ, ನಿರಂತರ ಪರಿಶ್ರಮ, ಸತತ ಅಧ್ಯಯನ ಶೀಲತೆ ವಿಷಯಗಳನ್ನು ಅರ್ಥೈಸಿಕೊಂಡು ಓದಿದಾಗ ಮಾತ್ರ ಯಶಸ್ಸು ಸಾಧ್ಯ. ಕಠಿಣ ಪರಿಶ್ರಮದಿಂದ ಓದುವಂತಹ ವಿದ್ಯಾಥಿರ್ಗಳಿಗೆ ಯಾವುದೇ ಸಾಮಾಜಿಕ ಆಥಿರ್ಕ ಸಮಸ್ಯೆಗಳಾಗಲಿ ಯಶಸ್ವಿಗೆ ಅಡತಡೆ ಆಗಲು ಸಾಧ್ಯವಿಲ್ಲ. ಶ್ರೇಷ್ಠ ವಿಜ್ಞಾನಿಗಳ ಬದುಕು, ಶ್ರೇಷ್ಠ ಕವಿಗಳ ಬದುಕು, ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ ಅರ್ಥೈಸಿಕೊಂಡು ಪ್ರೇರೇಪಿತ ಆಗಬೇಕು ಎಂದು ಬೊಮ್ಮನಹಳ್ಳಿ ಹೇಳಿದರು.
ವಿಧಾನ ಪರಿಷತ್ತ ಸದಸ್ಯ ಎಸ್​. ವಿ. ಸಂಕನೂರ, ಮಲ್ಲಣ್ಣ ಕೋಳಿ, ಎಸ್​. ಪಿ. ಸಂಶಿಮಠ, ವೀರೇಶ ಕೂಗು, ಅಶೋಕ ನಿಲೂಗಲ, ಪಿ. ಜಿ. ಪಾಟೀಲ. ಎಸ್​. ಬಿ. ಹಾವೇರಿ, ರಾಜೇಶ್ವರಿ ರಾಜೂರ, ಎಸ.ಆರ. ಹಿರೇಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net