ಕೆಎಲ್​ಇ ಧ್ವನಿ ಇಂಟರ್​ನೆಟ್ ರೆಡಿಯೋ 7ರಿಂದ ಆರಂಭ

kle dhwani
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿಯ ಮೊಟ್ಟಮೊದಲ ಹಾಗೂ ಏಕಮೇವ ಸಮುದಾಯ ಬಾನುಲಿ ಕೇಂದ್ರ ಕೆಎಲ್​ಇ ಧ್ವನಿ-ಬಿವಿಬಿ 90.4 ಎಫ್.ಎಂ. ಕಿರೀಟಕ್ಕೆ ಇನ್ನೊಂದು ಗರಿ. ಅದು ಅ. 7ರಿಂದ ಇಂಟರನೆಟ್ ರೆಡಿಯೋ ಆಗಿ ಕೇಳುಗರನ್ನು ತಲುಪಲಿದೆ.

ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಆಶಯದಂತೆ 2013ರಲ್ಲಿ ಕೆಎಲ್​ಇ ಧ್ವನಿ-ಬಿವಿಬಿ 90.4 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರವಾಗಿ ಕಾರ್ಯಾರಂಭ ಮಾಡಿತ್ತು. ಹುಬ್ಬಳ್ಳಿ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಈ ಬಾನುಲಿಯ ಪ್ರಸಾರವನ್ನು ಈಗ ಜಗತ್ತಿನಾದ್ಯಂತದ ಕೇಳುಗರು ಆಲಿಸುವಂತಾಗಲಿದೆ.

ಕೇಳುಗರು ಇಂಟರನೆಟ್ ಸೌಲಭ್ಯವಿರುವ ತಮ್ಮ ಮೊಬೈಲ್​ನಲ್ಲಿ ಪ್ಲೇಸ್ಟೋರ್ ಆಪ್​ಗೆ ಹೋಗಿ ಕೆಎಲ್​ಇ ಧ್ವನಿ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಅದರ ಮೂಲಕ ನಿತ್ಯ ಬೆಳಗ್ಗೆ 7ರಿಂದ 11ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 7ಗಂಟೆಯವರೆಗೆ ಕಾರ್ಯಕ್ರಮಗಳನ್ನು ನೇರಪ್ರಸಾರದಲ್ಲಿ ಕೇಳಬಹುದು. ಉಳಿದ ಅವಧಿಯಲ್ಲಿ ಇತರೆ ಕಾರ್ಯಕ್ರಮಗಳನ್ನ ಕೇಳಬಹುದು.

ಅ. 7ರಂದು ಬೆಳಗ್ಗೆ 10.30ಕ್ಕೆ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೇವರಿ ಈ ಇಂಟರನೆಟ್ ರೆಡಿಯೋ ಬಾನುಲಿ ಪ್ರಸಾರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಹಾಗೂ ಎಕ್ಸಿಕ್ಯೂಟಿವ್ ಡೀನ್ ಪೊ›. ಬಿ.ಎಲ್. ದೇಸಾಯಿ ಉಪಸ್ಥಿತರಿರುವರು ಎಂದು ಕೆಎಲ್​ಇ ಧ್ವನಿಯ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net