

ಬೆಳಗಾವಿ: ಈಚೆಗೆ ಮಹಾರಾಷ್ಟ್ರದ ಕರಾಡ್‌ನಲ್ಲಿ ಜರುಗಿದ ಸೈನೊಡೆಂಟ್ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್‌ನಲ್ಲಿ ಕೆಎಲ್‌ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದಲ್ಲಿ ಫ್ಯಾಶನ್ ಶೋ, ಗ್ರೂಪ್ ಡ್ಯಾನ್ಸ್ ಮತ್ತು ಡ್ಯುಯೆಟ್ ಸಿಂಗಿಂಗ್, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಫೇಸ್‌ಪೇಂಟಿಂಗ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕಾನ್ಫರೆನ್ಸ್‌ನಲ್ಲಿ ಕೆಎಲ್‌ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಪ್ರದರ್ಶನ ಗಮನ ಸೆಳೆಯಿತು.
ವೈಜ್ಞಾನಿಕ ನಾವೀನ್ಯತೆ ಮತ್ತು ಕಲಾತ್ಮಕ ಅಭಿವ್ಯಕ್ತಿ ಎರಡರಲ್ಲೂ ಮನ್ನಣೆ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಾಮನಿರ್ದೇಶಿತ ದಂತ ಕಾಲೇಜು ಮತ್ತು ವಿದ್ಯಾರ್ಥಿ ಸ್ನೇಹಿ ದಂತ ಕಾಲೇಜು ಎಂದು ಪ್ರತಿಷ್ಠಿತ ಶೀರ್ಷಿಕೆ ಪಡೆದುಕೊಂಡಿತು. ಅಲ್ಲದೆ, ಕಾಲೇಜು 21 ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕಾಲೇಜಿನ ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ, ಉಪಪ್ರಾಚಾರ್ಯೆ ಡಾ.ಅಂಜನಾ ಬಾಗೇವಾಡಿ, ಡೀನ್ ಡಾ.ವಿನಾಯಕ ಕುಂಬೋಜಕರ ಹಾಗೂ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಡಾ.ಸಾಗರ ಜಾಲಿಹಾಳ, ಡಾ. ಚೇತನ ಬಿ. ಅವರು ಬೆಂಬಲ ಮತ್ತು ಮಾರ್ಗದರ್ಶನ ನೀಡಿದ್ದಾರೆ.