

ಬೆಳಗಾವಿ : ದಿನವಿಡಿ ದುಡಿಯುವ ಕಾರ್ಮಿಕರು ಹಾಗೂ ಚಾಲಕರು ತಮ್ಮ ಆರೋಗ್ಯದ ಕಡೆ ಗಮನಕೂಡುವುದು ಕಡಿಮೆ. ಆದರೆ, ಇದೀಗ ಅಂತವರ ಆರಗ್ಯದ ಕಡೆ ಕೆಎಲ್‌ಇ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯ ಗಮನಹರಿಸುತ್ತಿದ್ದು, ಚಾಲಕರು ಹಾಗೂ ಕಾರ್ಮಿಕರು ಇದ್ದಲ್ಲಿಯೇ ಬುಧವಾರ ತೆರಳಿ ಆರೋಗ್ಯ ತಪಾಸಣೆ ಮಾಡಲಾಯಿತು.
ವಿದ್ಯಾಲಯದ ಓರಲ್ ಮೆಡಿಸನ್ ಆ್ಯಂಡ್ ರೇಡಿಯೋಲಜಿ, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ, ಮತ್ತು ಒರಲ್ ಪೆಥಾಲಜಿ ಅಂಡ್ ಮೈಕ್ರೊಬಯೋಲಜಿ ವಿಭಾಗವು ಕೆ.ಎಲ್.ಇ ಅಕಾಡಮಿ ಆಫ್ ಹಯರ್ ಎಜುಕೇಷನ್ ಮತ್ತು ಯು.ಕೆ ಒರಕಲ್ ಬಯೋಸನ್ಸ್ ಸಹಯೋಗದಲ್ಲಿ ನಗರದ ರಲ್ವೇ ನಿಲ್ದಾಣ, ಬಸ್ ನಿಲ್ದಾಣ, ಕ್ಲಬ್ ರಸ್ತೆ, ಕಾಲೇಜ್ ರಸ್ತೆ ಮತ್ತು ನಗರದ ಅನೇಕ ಕಡೆ ತೆರಳಿ ಅಲ್ಲಿನ ಆಟೋ ನಿಲ್ದಾಣದಲ್ಲಿದ್ದ ಆಟೋ ಚಾಲಕರಿಗೆ ಬಾಯಿ ತಪಾಸಣೆ ಮಾಡುವುದರ ಜತೆಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ, ಕ್ಯಾನ್ಸರ್ ಸ್ಕ್ರೀನಿಂಗ್ ನಡೆಸಿ ತಂಬಾಕನ್ನ ತ್ಯಜಿಸುವಂತೆ ತಿಳುವಳಿಕೆ ನೀಡಲಾಯಿತು. ಬಾಯಿ ಆರಗ್ಯ ಕಾಪಾಡಲು ಅವಶ್ಯವಾದ ಕಿಟ್ ಉಚಿತವಾಗಿ ವಿತರಿಸಲಾಯಿತು.
ಶಿಬಿರದಲ್ಲಿ ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ ಮಾತನಾಡಿ, ತಪಾಸಣೆಗೂಳಗಾದ ಎಲ್ಲಾ ಆಟೋ ಚಾಲಕರಿಗೆ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಚಾಲಕರು ತಮ್ಮ ಬಾಯಿ ಆರಗ್ಯ ಕಾಪಾಡಿಕೂಳ್ಳಲು ಈ ಅವಕಾಶವನ್ನ ಉಪಯೋಗಿಸಿಕೂಳ್ಳಬೇಕು ಎಂದು ತಿಳಿಸಿದರು.
ಡಾ.ಪುಣ್ಯ ಅಂಗಡಿ ನೇತೃತ್ವದಲ್ಲಿ ಡಾ.ಸಾಗರ ಜಾಲಿಹಾಳ, ಡಾ.ದಾನೇಶ್ವರಿ, ಡಾ.ವೀಣಾ ನಾಯ್ಕ, ಡಾ.ಅನಿಲ್ ಆಂಕೋಲ, ಡಾ.ವಶಾಲಿ ಕೇಲುಸ್ಕರ್ ಮತ್ತು ಸ್ನಾತಕತ್ತರ ಪದವೀಧರರು, ಇಂಟರ್ನಿಗಳು ಈ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿ ಸಲಹೆ ನೀಡಿದರು.