ಕೆಎಲ್ಇ ಶತಮಾನೋತ್ಸವ  ಸಭಾಂಗಣದಲ್ಲಿ 30ನೇ ರಾಷ್ಟ್ರೀಯ ಸಮ್ಮೇಳನ

IMG-20231028-WA0016.jpg
Published on


ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಓರಲ್ ಪೆಥಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗವು ಇಂಡಿಯನ್ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪ್ಯಾಥಾಲಜಿಸ್ಟ್‌ಗಳ 30 ನೇ ರಾಷ್ಟ್ರೀಯ ಸಮ್ಮೇಳನವನ್ನು ನವಂಬರ್ 3 ರಿಂದ 5 ವರೆಗೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ಕೆಎಲ್ ಇ ಶತಮಾನೋತ್ಸವ ಕನ್ನೆನ್ನನ್ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್‌ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಹಾಗೂ ಕಾಹೆರ ಕುಲಪತಿಗಳಾದ ಡಾ. ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಪೆರನ ಉಪಕುಲಪತಿ ಡಾ. ನಿತಿನ್ ಗಂಗಾನೆ, ಸಂಸ್ಥೆಯ ನಿರ್ದೇಶಕರಾದ ಡಾ ವಿ ಐ ಪಾಟೀಲ, ದೇಶ ,ವಿದೇಶಗಳಿಂದ 650ಅತಿಥಿಗಳು ಭಡಗವಹಿಸಲಿದ್ದಾರೆ.
ಸಮಾವೇಶದ ಮುಖ್ಯ ಭಾಷಣಕಾರರಾಗಿ ಜಪಾನ್‌ನ ಡಾ. ಯೂಚಿ ತನಕಾ ಅಮೇರಿಕೆಯ ಡಾ. ಪ್ರವೀಣ್ ಆರಾನಿ, ಮಸ್ಕತ್‌ ಡಾ. ಸಂಜಯ್ ಸರಾಫ್, ನಾಗಪೂರನ ಡಾ. ಸುಚಿತ್ರಾ ಗೋಸಾವಿ, ಕೋಲ್ಕತ್ತಾದ ಡಾ. ಜಯಗೋಪಾಲ್ ರೇ, ಬೆಂಗಳೂರಿನ ಡಾ. ಕವಿತಾ ರಾವ್, ದೆಹಲಿಯ ಡಾ.ಪುನೀತ್ ಅಹುಜಾ, ಓರಿಸ್ಸಾದ ಡಾ ಜಗದೀಶ್ ರಾಜಗುರು, ಮಧುರೈನ ಡಾ ನಾರಾಯಣ ಗುರುರಾಜ್‌ ಹಾಗೂಡಾ ಎನ್. ಗೋವಿಂದರಾಜ್ ಕುಮಾರ್ ಅವರು ಆಗಮಿಸಲಿದ್ದಾರೆ ಎಂದು ಸಮ್ಮೇಳನವನ್ನು ಸಂಘಟಧ್ಯಕ್ತಿಯಾಗಿ ಹಳ್ಳಿಕೇರಿಮಠ ತಿಳಿಸಿದರು.
ಸಂಘಟನಾ ಕಾರ್ಯದರ್ಶಿಯಾಗಿ ಡಾ.ಪುಣ್ಯ ಅಂಗಡಿ ಹಾಗೂ ಕೋಶಾಧಿಕಾರಿ ಡಾ.ವೀಣಾ ನಾಯ್ಕ ಅವರ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ವೈಜ್ಞಾನಿಕ ಸಮಿತಿ ಅಧ್ಯಕ್ಷೆ ಡಾ.ದೀಪಾ ಮಾನೆ, ಡಾ.ಪುಷ್ಪಕ ಡಾ.ಮಂಜುಳಾ, ಎಂ.ಡಾ.ಚೇತನ್ ಬೆಳಲ್ಲಾವರ್, ಡಾ.ಶ್ವೇತಾ ಕುಂಭೋಜಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net