

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೆಎಲ್ಇ ಶಿಕ್ಷಣ ಸಂಸ್ಥೆಯ ಜೆ.ಜಿ. ವಾಣಿಜ್ಯ ಕಾಲೇಜ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ರೈಮ್ ಫೆಸ್ಟ್ನಲ್ಲಿ ನಗರದ ಕೆಎಲ್ಇ ಸಂಸ್ಥೆಯ ವಾಣಿಜ್ಯ ಪದವಿ ಕಾಲೇಜ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.
ಕಾಲೇಜಿನ ವಿದ್ಯಾರ್ಥಿನಿಯರಾದ ಖುಷಿ, ಆಂಚಲ್, ಸಾಕ್ಷಿ, ಕನಿಷ್ಕಾ, ಪೂರ್ವಿ, ಚೇತನಾ ನೃತ್ಯದಲ್ಲಿ ಹಾಗೂ ಸೃಷ್ಟಿ, ಲಕ್ಷ್ಮೀ, ಮೇದಿನಿ, ಧನಶ್ರೀ, ಅಂಜನ್, ಓಂಕಾರ, ಮಲ್ಲನಗೌಡ, ರೋಹಿತ್ ಸಂಗೀತ ವಾದ್ಯ ನುಡಿಸುವಿಕೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಕಾಲೇಜಿಗೆ ಜನರಲ್ ಚಾಂಪಿಯನ್ಶಿಪ್ ತಂದಿತ್ತರು.