ಕೆಎಲ್‌ಇ ಕಾಲೇಜ್ ಪ್ರವೇಶಕ್ಕೆ ಪರೀಕ್ಷೆ

h20-kle
Published on

ಹುಬ್ಬಳ್ಳಿ: ಬೆಳಗಾವಿಯ ಕೆಎಲ್‌ಇ ಸಂಸ್ಥೆ ವತಿಯಿಂದ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮುಂಬೈನಲ್ಲಿ ಭಾನುವಾರ ಕೆಎಲ್‌ಇ ವಿದ್ಯಾರ್ಥಿ ಶಿಷ್ಯವೇತನ ಪರೀಕ್ಷೆ ಜರುಗಿತು.

ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ, ಗೋಕಾಕ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಹಾವೇರಿ, ಗದಗ, ಯರಗಟ್ಟಿ, ಮೂಡಲಗಿ, ಘಟಪ್ರಭಾ, ರಾಣೆಬೆನ್ನೂರ, ಗಂಗಾವತಿ, ಹುಕ್ಕೇರಿ, ಖನಗಾಂವ್, ಕೌಲಜಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಒಟ್ಟು 7553 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಕೆಎಲ್‌ಇ ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಉಚಿತ ಪ್ರವೇಶಕ್ಕೆ ಈ ಪರೀಕ್ಷೆ ನಡೆಯಿತು. ಶಿಷ್ಯವೇತನದ ಮೊತ್ತ 1 ಕೋಟಿ ರೂ.ಗೂ ಹೆಚ್ಚು ನಿಗದಿಪಡಿಸಲಾಗಿದೆ.

ಏ. 6ಕ್ಕೆ ಮತ್ತೊಂದು ಪರೀಕ್ಷೆ: ಮತ್ತೊಂದು ಶಿಷ್ಯವೇತನ ಪರೀಕ್ಷೆ ಏ. 6ರಂದು ಬೆಳಗ್ಗೆ 10ಕ್ಕೆ ವಿವಿಧ ಕಾಲೇಜ್‌ಗಳಲ್ಲಿ ಆಯೋಜಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪಾಲಕರು ಸಮೀಪದ ಕೆಎಲ್‌ಇ ಸಂಸ್ಥೆಯ ಕಾಲೇಜ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಉಚಿತ ಅರ್ಜಿ ಸಲ್ಲಿಸಿ ಸದುಪಯೋಗ ಪಡೆಯಬೇಕು ಎಂದು ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net