ಕೆಎಲ್‌ಇ ಕಾಲೇಜು ಚಾಂಪಿಯನ್

4Athni1
Published on

ಅಥಣಿ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪುರುಷರ ತಂಡ ಈಚೆಗೆ ಏರ್ಪಡಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪುರುಷ-ಮಹಿಳೆಯರ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪುರುಷರ ತಂಡದ ಸಾಗರ ಮಂಗಳೂರ ವಿವಿಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಪುರುಷರ ವಿಭಾಗದಲ್ಲಿ 6 ಹಾಗೂ ಮಹಿಳೆಯರ ವಿಭಾಗದಲ್ಲಿ 4 ಪದಕಗಳನ್ನು ಗಳಿಸಿದ್ದಾರೆ. ಅಬೂಬುಕರ್ ಮುಲ್ಲಾ 61 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ, 81 ಕೆಜಿ ತೂಕದ ವಿಭಾಗದಲ್ಲಿ ಶಿವಾನಂದ ಭೋಸಲೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 89 ಕೆಜಿ ತೂಕದ ವಿಭಾಗದಲ್ಲಿ ಮುರಗೇಶ ಚಿಕ್ಕರಡ್ಡಿ ಪ್ರಥಮ, 96 ಕೆಜಿ ತೂಕದ ವಿಭಾಗದಲ್ಲಿ ರೋಹಿತ ತೆಲಸಂಗ ದ್ವಿತೀಯ, 102 ಕೆಜಿ ತೂಕದ ವಿಭಾಗದಲ್ಲಿ ವಿನೋದ ಬಡಿಗೇರ ಪ್ರಥಮ ಸ್ಥಾನ ಪಡೆಯುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ 49 ಕೆಜಿ ತೂಕದ ವಿಭಾಗದಲ್ಲಿ ಧನಶ್ರೀ ಯಾದವ ಪ್ರಥಮ, ಅಕ್ಷತಾ ತಳವಾರ ದ್ವಿತೀಯ, ಹಾಗೂ 62 ಕೆಜಿ ತೂಕದ ವಿಭಾಗದಲ್ಲಿ ಅಶ್ವಿನಿ ಕೋಟಿ ತೃತೀಯ ಸ್ಥಾನ ಪಡೆದಿದ್ದಾರೆ. 87 ಕೆಜಿ ವಿಭಾಗದಲ್ಲಿ ಭಾಗ್ಯಶ್ರೀ ಕಾಂಬಳೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ದೈಹಿಕ ನಿರ್ದೇಶಕ ಡಾ.ಮಂಜುನಾಥ ಎನ್.ವಿ ತರಬೇತಿ ನೀಡಿದ್ದರು. ಪ್ರ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net