ಕೆಎಲ್ಇ ಸಿಬಿಎ ವಿದ್ಯಾರ್ಥಿಗಳ ಸಾಧನೆ

Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಆಡ್ಮಿನಿಸ್ಟ್ರೆಶನ್ (ಸಿಬಿಎ) ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ "ವಿ ಸೃಜನ್ 2025' ಸ್ಪರ್ಧೆಯಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ.

ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನವೋದ್ಯಮ ಹಾಗೂ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ಕಡೆಗಳಿಂದ 188 ತಂಡಗಳು ಭಾಗವಹಿಸಿದ್ದವು.

ಇದರಲ್ಲಿ ಸಿಬಿಎ ಪದವಿ ವಿದ್ಯಾರ್ಥಿಗಳಾದ ನಬೀಲ್ ಎಲ್ ಹಾಗೂ ದಿಶಾಂತ ಸೋಳಂಕಿ ಪಾಲ್ಗೊಂಡು ನಗದು ಪುರಸ್ಕಾರ ಪಡೆದಿದ್ದಾರೆ.

ಉದ್ಯಮಾಸಕ್ತರಿಗೆ ವೇದಿಕೆಯಾಗಿದ್ದ ಸ್ಪರ್ಧೆಯಲ್ಲಿ ತಮ್ಮ ಐಡಿಯಾಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಗಿತ್ತು. ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಹೊಸ ಆವಿಷ್ಕಾರವನ್ನು ಪ್ರಸ್ತುತಪಡಿಸಿ ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net