ಬಿಬಿಎ ಕಾಲೇಜಿನಲ್ಲಿ ಸೆಮಿನಾರ್​

IMG_20250304_205204_364.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಆಡ್ಮಿನಿಸ್ಟ್ರೆಶನ್ ವತಿಯಿಂದ ಆಗ್ಮೆಂಟೆಡ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿ ಕುರಿತು ಸೋಮವಾರ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

ದ್ವೀತಿಯ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ದಾವಣಗೆರೆಯ ಟೆಕ್ ಆರ್ಕೆ ಐಟಿ ಸಲ್ಯುಷನ್ಸ್ ಸಿಇಒ ರಂಜಿತ್ ನಾಯರ್ ಮಾಹಿತಿ ನೀಡಿದರು.

ವರ್ಚುವಲ್ ಜಗತ್ತು ಹಾಗೂ ವಾಸ್ತವ ಜಗತ್ತಿಗೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಬಹಳಷ್ಟು ಮಾಹಿತಿ ಪಡೆದರು. ಪ್ರೊ. ಕೇಶವ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net