ಶರಣರ ದಟ್ಟ ಪ್ರಭಾವ ಸಪ್ತಶ್ರೀಗಳ ಮೇಲಿದೆ: ಪ್ರೊ. ರಾಮರೆಡ್ಡಿ

14GDG06
Published on

ವಿಜಯವಾಣಿ ಸುದ್ದಿಜಾಲ ಗದಗ

ಕೆಎಲ್​ಇ ಸಂಸ್ಥೆಯ ಆರಮಭಿಸಿದ ಸಪ್ತಷಿರ್ಗಳು ಮತ್ತು ಸಂಸ್ಥಾಪಕ ಸದಸ್ಯರ ಮೇಲೆ ಶರಣರ ತತ್ವಗಳ ದಟ್ಟ ಪ್ರಭಾವವಿದೆ. ಶರಣ ತತ್ವಗಳ ಅನುಸಾರವಾರವಾಗಿಯೇ ಅವರು ಜ್ಞಾನದಾಸೋಹವನ್ನು ಪ್ರಾರಂಭಿಸಿದರು ಎಂದು ಕೆಎಲ್​ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಪ್ರೊ. ಕೆ. ರಾಮರೆಡ್ಡಿ ಹೇಳಿದರು.

ನಗರದ ಜೆ. ಟಿ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 109ನೇ ಕೆಎಲ್​ಇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಬ್ಬಳ್ಳಿ, ಧಾರವಾಡಗಳಲ್ಲಿ ಮರಾಠಿ ಶಾಲೆಗಳು ಪ್ರಾರಂಭವಾದ ಸಮಯದಲ್ಲಿ ಕನ್ನಡಿಗರು ಆತ್ಮಬಲ ಕಳೆದುಕೊಂಡು ಅನಾಥ ಪ್ರಜ್ಞೆಯಿಂದ ಬಳಲುತ್ತಿರುವ ವಾತಾವರಣವಿತ್ತು. ಅಂತಹ ಸಮಯದಲ್ಲಿ ಕೆ.ಎಲ್​.ಇ. ಸಂಸ್ಥೆಯನ್ನು ಪ್ರಾರಂಭಿಸಿದ ಏಳು ಜನ ಶಿಕರು ಮತ್ತು ಈ ಕಾರ್ಯಕ್ಕೆ ಬೆಂಬಲವಾಗಿ ನಿಂತ ಪೋಷಕರು ಮತ್ತು ದಾನಿಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಬೆಳಗಾವಿಯ ಲಿಂಗಾಯತ ಬೋಡಿರ್ಂಗ್​ ಅನ್ನ ದಾಸೋಹಕ್ಕೆ, ಧಾರವಾಡದ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ಅರ್ಥ ದಾಸೋಕ್ಕೆ, ಬೆಳಗಾವಿಯ ಕರ್ನಾಟಕ ಲಿಂಗಾಯತ ಸಂಸ್ಥೆ ಜ್ಞಾನ ದಾಸೋಕ್ಕೆ ಹೆಸರಾಗಿವೆ. ಕೆ.ಎಲ್​.ಇ. ಸಂಸ್ಥೆ ಮುಂದೆ ಲಿಂಗಾಯತ ಮತ್ತು ಲಿಂಗಾಯತೇತರರನ್ನೂ ಒಳಗೊಳ್ಳುವ ಸಂಸ್ಥೆಯಾಗಿ ಬೆಳೆಯಿತು. ಕೆ.ಎಲ್​.ಇ. ಸಂಸ್ಥೆಯನ್ನು ಹುಟ್ಟು ಹಾಕಿದ ಸಪ್ತಷಿರ್ಗಳು ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆಯಲು ಅರ್ಹರಿದ್ದರೂ ಸಹ ಅದನ್ನು ನಿರಾಕರಿಸಿ ಅಲ್ಪ ಸಂಬಳದ ಮೇಲೆ ಶಿಕ ವೃತ್ತಿ ಮುಂದುವರಿಸಿ ಸಂಸ್ಥೆಯನ್ನು ಕಟ್ಟಲು ಶ್ರಮಿಸಿದರು. ನಾವು ಕಟ್ಟುವ ಸಂಸ್ಥೆಯು ಡೆಕ್ಕನ್​ ಶಿಣ ಮಾದರಿಯನ್ನು ಹೊಂದಿರಬೇಕೆಂದು ಅವರು ನಿರ್ಧರಿಸಿದ್ದರು ಎಂದು ಪ್ರೊ. ಕೆ. ರಾಮರೆಡ್ಡಿ ಹೇಳಿದರು.

ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಎಸ್​. ವಿ. ಕೂಗು, ಉತ್ತರ ಕರ್ನಾಟಕದ ಶೈಣಿಕ ಮತ್ತು ಆರೋಗ್ಯ ೇತ್ರದಲ್ಲಿ ಕೆ.ಎಲ್​.ಇ ಸಂಸ್ಥೆಯ ಹೆಗ್ಗಳಿಕೆ. ಕೊಡುಗೆ ಅಪಾರವಾಗಿದೆ. ಸಪ್ತಷಿರ್ಗಳು ಎಂದು ಕರೆಸಿಕೊಂಡಿದ್ದ ಶಿಕರು ಸಮಾಜದ ಉನ್ನತಿಗಾಗಿ ಶ್ರಮಿಸಿದರು. ಅದೇ ಹಾದಿಯನ್ನು ಇಂದಿನ ಶಿಕರು ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪಿ. ಜಿ. ಪಾಟೀಲ, ಡಾ. ಎ. ವಿ, ದೇವಾಂಗಮಠ, ಡಾ. ಶಂಕರ ಮಡವಾಳೆ, ಪ್ರೊ. ಎಸ್​. ಎ.ಬೆಲ್ಲದ, ರಮೇಶ ಜಿ. ಕೆ, ಡಾ. ಅಂದಯ್ಯ ಅರವಟಗಿಮಠ, ಡಾ. ನಾಗರಾಜ ಓ, ಡಾ. ವಿಜಯಲಕ್ಷಿ$್ಮ ಕಿಲ್ಲೇದಾರ, ಡಾ. ನೇತ್ರಾವತಿ ಅಂಗಡಿ, ಡಾ. ಗುಂಡಪ್ಪ ನಾಯಕ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net