ಬೆಳೆಯುತ್ತಿರುವ ತಾಂತ್ರಿಕತೆಯೊಂದಿಗೆ ಹೆಜ್ಜೆ ಹಾಕಿ, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ ಸಲಹೆ, ಕೆಎಲ್ಇ ತಾಂತ್ರಿಕ ವಿವಿ ಘಟಿಕೋತ್ಸವ

IMG_20240127_103925_70.jpg
Published on

ಹುಬ್ಬಳ್ಳಿ: ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದೇಶವು ತಾಂತ್ರಿಕವಾಗಿ ಬಹಳಷ್ಟು ಮುಂದುವರೆಯುತ್ತಿದೆ, ವಿದ್ಯಾರ್ಥಿಗಳು ಈ ವೇಗದೊಂದಿಗೆ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಶಿಕ್ಷಣ ಎಂಬುದು ಅಪೂರ್ಣವಾಗುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಎ.ಎಸ್. ಕಿರಣಕುಮಾರ ಅಭಿಪ್ರಾಯಪಟ್ಟರು.

ಇಲ್ಲಿಯ ಬಿವಿಬಿ ಆವರಣದ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆಯುತ್ತಿರುವಾಗ ಕೇವಲ ಪದವಿ ಪಡೆದು ಬಿಟ್ಟರೆ ಕೆಲಸ ಮುಗಿಯಿತು ಎನ್ನುವಂಥ ಕಾಲವಿದಲ್ಲ. ವಿದ್ಯಾಥಿರ್ಗಳು ತಮ್ಮ ಕಲಿಕೆಯನ್ನು ನಿರಂತರವಾಗಿಸಿಕೊಳ್ಳಬೇಕು. ಜ್ಞಾನದಾಹ ಸದಾ ಮುಂದುವರಿಯಬೇಕು. ಅಂದಾಗಲೇ ನೀವು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಭಾರತ ಮುಂದಿನ ದಿನಗಳಲ್ಲಿ ಮೂರನೇ ಆಥಿರ್ಕ ಶಕ್ತಿಯಾಗಿ ಬೆಳೆಯುವಲ್ಲಿ ದಾಪುಗಾಲು ಇಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾಥಿರ್ಗಳ ಕೊಡುಗೆ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.

ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಅವರು ವಾಷಿರ್ಕ ಸಾಧನೆಯ ವರದಿ ವಾಚನ ಮಾಡಿದರು. ಶೇ. 80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿಯೇ ನೇಮಕಾತಿ ಹೊಂದುತ್ತಿರುವುದು ಕೆಎಲ್ಇ ತಾಂತ್ರಿಕ ವಿವಿಯ ಸಾಧನೆಯಾಗಿದೆ. ಇಲ್ಲಿಯ ಇನ್ಕ್ಯುಬೇಶನ್ ಸೆಂಟರ್ನಲ್ಲಿ 145 ಸ್ಟಾರ್ಟಪ್ ಗಳು ಕಾರ್ಯ ನಿರ್ವಹಿಸುತ್ತಿವೆ. ಬೆಳಗಾವಿಯಲ್ಲಿ ಹೊಸದಾಗಿ ಇನ್ಕ್ಯುಬೇಶನ್ ಸೆಂಟರ್ ಆರಂಭಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಸಮಾಜ ವಿಜ್ಞಾನ, ಕಾನೂನು ಸೇರಿ ಬಹು ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡಿ ಎಲ್ಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಗುರಿ ಇದೆ ಎಂದು ಶೆಟ್ಟರ್ ಹೇಳಿದರು.

ಈ ವರ್ಷ 1608 ಪದವಿ ಪ್ರದಾನ, 9 ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಕೆಎಲ್ಇ ವಿಶ್ವವಿದ್ಯಾಲಯವು ಅತೀ ಕಡಿಮೆ ಸಮಯದಲ್ಲಿ ಉತ್ತಮ ಸಾಧನೆ ಮಾಡಿದೆ. ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ನಮ್ಮ ವಿದ್ಯಾಥಿರ್ಗಳ ಪಾಲು ಹೆಚ್ಚಾಗಿದೆ ಎಂಬುದು ವಿಶೇಷ ಎಂದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಿದರು.

ಅನಿಲ ನಂದಿ, ಪ್ರಕಾಶ ತೆವರಿ, ಡಾ. ಬಿ.ಎಸ್. ಅನಾಮಿ, ಬಿ.ಎಲ್. ದೇಸಾಯಿ, ಡಾ. ಸುಭಾಸ ಪಾಟೀಲ, ಡಾ. ಉಮಾ ಮುದೇನಗುಡಿ, ಡಾ. ಕೆ.ಎನ್.ಎಸ್. ಆಚಾರ್ಯ, ಡಾ. ಬಿ.ಬಿ. ಕೊಟ್ಟೂರಶೆಟ್ಟರ, ಪ್ರೊ. ಮಲ್ಲಿಕಾರ್ಜುನಯ್ಯ ಇತರರು ಉಪಸ್ಥಿತರಿದ್ದರು.

ದೀಪಕ ಯರಗುಪ್ಪಿ, ನಮ್ರತಾ ಹೆಗಡೆ, ಝರೀನ್ಕೌಸರ್ ಕಾಜಿ, ರೂಪಾ ಕುರಿ, ಉದಯ ಕುಲಕಣಿರ್, ನಾಗರಾಜ ಏಕಬೋಟೆ, ಲೀನಾ ಹುಬಳೀಕರ, ಪ್ರವಿಣ ಚಂದರಗಿ ಹಾಗೂ ಅನುಶ್ರೀ ಕಿಣಿ ಅವರು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ವಿಶೇಷವೆಂದರೆ ಇವರೆಲ್ಲರೂ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2023ನೇ ಸಾಲಿನಲ್ಲಿ ಒಟ್ಟು 1608 ವಿದ್ಯಾಥಿರ್ಗಳು ತೇರ್ಗಡೆಯಾಗಿದ್ದು, ಅದರಲ್ಲಿ 1293 ಪದವಿಧರರು, 306 ಸ್ನಾತಕೋತ್ತರ ಪದವಿಧರರು ಹಾಗೂ 9 ಸಂಶೋಧನಾ ವಿದ್ಯಾಥಿರ್ಗಳಾಗಿದ್ದಾರೆ. ಈ ಬಾರಿ 13 ವಿದ್ಯಾಥಿರ್ಗಳಿಗೆ ಚಿನ್ನದ ಪದಕ ಹಾಗೂ 15 ವಿದ್ಯಾಥಿರ್ಗಳಿಗೆ ಬೆಳ್ಳಿ ಪದಕ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net