

ಯಡ್ರಾಮಿ: ನಮ್ಮಲ್ಲಿರುವ ಅಜ್ಞಾನ ತೊಲಗಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸುವವನೇ ನಿಜವಾದ ಗುರು. ಗುರುವಿನ ಅನುಗ್ರಹ ದೊರೆತರೆ ಕಠಿಣ ಮನಸ್ಸೂ ಕರಗಿ ನೀರಾಗಿ ಹರಿಯಬಲ್ಲದು ಎಂದು ಆಲೂರು ಸಂಸ್ಥಾನ ಹಿರೇಮಠದ ಶ್ರೀ ಕೆಂಚವೃಷಬೇAದ್ರ ಶಿವಾಚಾರ್ಯರು ಹೇಳಿದರು.
ಆಲೂರು ಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಗುರು ಎಂದರೆ ಈಶ್ವರನ ಸದ್ಗುಣ ರೂಪ. ಪ್ರತಿ ಗುರು ಭಕ್ತರಿಗೆ ಅಧ್ಯಾತ್ಮದ ಬೋಧನಾಮೃತ ನೀಡುತ್ತಿರುತ್ತಾರೆ. ಇಂತಹ ಮಹಾನ್ ಗುರುಗಳ ಋಣ ತೀರಿಸುವುದು ಅಸಾಧ್ಯ. ಆದರೂ ಸನ್ಮಾರ್ಗದಲ್ಲಿ ನಡೆಸುತ್ತಿರುವ ಗುರುವಿಗೆ ಕೃತಜ್ಞತೆ ವ್ಯಕ್ತಪಡಿಸುವುದೆ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉz್ದೆÃಶ ಎಂದರು.
ಪ್ರಮುಖರಾದ ಶಾಂತಯ್ಯ ಹಿರೇಮಠ, ಡಾ.ಶಿವಾನಂದ ಹೂಗಾರ, ಬಸ್ಸಣ್ಣ ದೇಸಾಯಿ, ಶಿವಲಿಂಗಯ್ಯ ಹಿರೇಮಠ, ಅಮರೇಶ, ಶರಣಬಸವ ಹುಣಸಗಿ, ಶಿವಶರಣಪ್ಪಗೌಡ ಮಾಲಿಪಾಟೀಲ್, ಚಂದ್ರಶೇಖರಗೌಡ ಮಾಲಿಪಾಟೀಲ್, ಬಸವರಾಜ ತಳವಾರ, ಸುರೇಶ ಬಡಿಗೇರ, ಸಿದ್ದಣ್ಣ ಪಾಸೋಡಿ, ಶರಣಗೌಡ ಬಿರಾದಾರ, ಶರಣಪ್ಪ ಹಂಗರಗಿ, ಬಸವರಾಜಗೌಡ ಮಾಲಿಪಾಟೀಲ್, ತಿಪ್ಪಣ್ಣ ಹಂಗರಗಿ, ಚಂದ್ರಕಾAತಗೌಡ ಮಾಲಿಪಾಟೀಲ್, ವೀರಭದ್ರಗೌಡ ಮಾಲಿಬಿರಾದಾರ, ಶರಣಪ್ಪಗೌಡ ಪಾಸೋಡಿ, ಮಡಿವಾಳಪ್ಪ ಕೋಟನೂರ, ಬಸವರಾಜ ಹುಂಡೇಕಾರ ಇತರರಿದ್ದರು.