

ಯಡ್ರಾಮಿ: ಯಡ್ರಾಮಿಯಿಂದ ಜೇವರ್ಗಿಗೆ ತೆರಳುತ್ತಿದ್ದ ಕೆಎ-32, F-2220 ಬಸ್ ನಲ್ಲಿ ತೆರಳುತ್ತಿದ್ದ ಮಕ್ಕಳನ್ನು ಪಾಸ್ ನಡೆಯಲ್ಲ ಎಂದು ಮಳೆಯಲ್ಲಿಯೇ ಇಳಿಸಿ ಹೋದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ಯಡ್ರಾಮಿಯಿಂದ ಜೇವರ್ಗಿಗೆ ಆದೇಶ(12)ಹಾಗೂ 5 ವರ್ಷದ ತಮ್ಮ, 9 ವರ್ಷದ ತಂಗಿಯನ್ನು ಕರೆದುಕೊಂಡು ಜೇವರ್ಗಿಗೆ ತೆರಳುತ್ತಿದ್ದನು. ಬಸ್ ಹತ್ತಿಸುವಾಗ ಪಾಸ್ ನಡೆಯುತ್ತೆ ಇಲ್ಲ ಎಂದು ಕೇಳಿಯೇ ಪಾಲಕರು ಬಸ್ ಹತ್ತಿಸಿ ಕಳಿಸಿದ್ದಾರೆ.
ಹರನಾಳ ಕ್ರಾಸ್ ಹತ್ತಿರ ಬಂದಮೇಲೆ ಪಾಸ್ ನಡೆಯಲ್ಲ ಎಂದು ಹೇಳಿ ಸುರಿಯುವ ಮಳೆಯಲ್ಲಿಯೇ ಮಕ್ಕಳನ್ನು ಹರನಾಳ ಕ್ರಾಸ್ ಹತ್ತಿರ ಕೆಳಗೆ ಇಳಿಸಿ ಹೋಗಿದ್ದಾರೆ. ಇದರಿಂದ ಅರ್ದ ಗಂಟೆ ಮಕ್ಕಳು ಮಳೆಯಲ್ಲಿಯೇ ಭಯದಲ್ಲಿ ನಿಂತಿದ್ದಾರೆ. ನಂತರ ಬರುವ ವಾಹನವನ್ನು ತಡೆದು ಪಾಲಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಇದರಿಂದ ಆಕ್ರೋಷಗೊಂಡ ಪಾಲಕರು ಮಕ್ಕಳೆಂದು ನೋಡದೆ ಮಾನವೀಯತೆ ಮರೆತ ಕಂಡಕ್ಟರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಸ್ತಾರಿ ಮಾರ್ಗವಾಗಿ ಜೇವರ್ಗಿಗೆ ತೆರಳುವ ಬಸ್ಸಿಗೆ ಹೊಸದಾಗಿ ಕಂಡಕ್ಟರ್ ಬಂದಿದ್ದಾನೆ. ಮಾರ್ಗದ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಹೀಗಾಗಿದೆ.