ಕಲಬುರಗಿ; ಕಂಪ್ಯೂಟರ್​ ಸೆಂಟರ್​ನಲ್ಲಿ ಪತ್ರಿಕಾ ವಿತರಕರ ದಿನ

0409Klb06
Published on

ಕಲಬುರಗಿ: ನಗರದ ಖಾದ್ರಿ ಚೌಕ್ ನಲ್ಲಿರುವ 'ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ' ಬಸವೇಶ್ವರ ಸಮಾಜ ಸೇವಾ ಬಳಗ'ದಿಂದ ಸೋಮವಾರ "ವಿಶ್ವ ಪತ್ರಿಕಾ ವಿತರಕರ ದಿನಾಚರಣೆ" ಆಚರಿಸಲಾಯಿತು.

ಬಳಗದ ಅಧ್ಯಕ್ಷ ಎಚ್​.ಬಿ.ಪಾಟೀಲ್​ ಮಾತನಾಡಿ, ಮನೆ-ಮನೆಗೂ ಪತ್ರಿಕೆಗಳನ್ನು ತಲುಪಿಸುವಲ್ಲಿ ವಿತರಕರ ಪಾತ್ರ ಪ್ರಮುಖವಾಗಿದೆ. ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು. ವಿತರಕರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಪತ್ರಿಕಾ ವಿತರಕರಾದ ಗುರುರಾಜ ಗುಡ್ಡಾ, ಅನೀಲ ಗೌಳಿ, ಚನ್ನವೀರ ಹಿರೇಮಠ, ನಾಗರಾಜ ಹಡಪದ ಅವರಿಗೆ ಸತ್ಕರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net