

ಕಲಬುರಗಿ; ಪ್ರೌಢಶಾಲೆ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಹಡಗಿಲ್ ಹಾರತಿಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಶ್ರೀದೇವಿ ಕಟ್ಟಿಮನಿ ಅವರು ತಮಗೆ ನೀಡಿದ ಪ್ರಶಸ್ತಿ ಮೊತ್ತವನ್ನು ಅನಾಥಾಶ್ರಮಕ್ಕೆ ನೀಡಿ ಮಾದರಿಯಾಗಿದ್ದಾರೆ.
2023- 24ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾಗಿದ್ದು, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿತ್ತು. ಪುರಸ್ಕಾರ ಪಡೆದ ಬಳಿಕ ನೇರವಾಗಿ ಉದನೂರ ರಸ್ತೆಯಲ್ಲಿರುವ ನಂದಗೋಕುಲ ಅನಾಥ ಮಕ್ಕಳ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲಕಾಲ ಸಮಯ ಕಳೆದರು. ಎಲ್ಲರಿಗೂ ಸಿಹಿ ಹಂಚಿ, ಬಳಿಕ ಪ್ರಶಸ್ತಿಯೊಂದಿಗೆ ನೀಡಿದ 5 ಸಾವಿರ ರೂ.ಗಳನ್ನು ಆಶ್ರಮಕ್ಕೆ ನೀಡಿದ್ದಾರೆ.
ತಾಲೂಕ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ರಾಜಶೇಖರ್ ಗೋನಾಯಕ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಶರಣಪ್ಪ ಮಂಟಾಳೆ, ಉಪನಿರ್ದೇಶಕರ ಕಚೇರಿಯ ಚಂದ್ರಶೇಖರ್ ಪಾಟೀಲ್, ಸಂಪನ್ಮೂಲ ಶಿಕ್ಷಕರಾದ ಸಂಜೀವ್ ಕುಮಾರ್ ಪಾಟೀಲ್ , ಅನಿಲ್ ತರಫೈಲ ಸಂಸ್ಥೆಯ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.