

ಕಲಬುರಗಿ: ತಮಿಳು ನಾಡಿನ ಮುಖ್ಯಮಂತ್ರಿ ಮಗ ಉದಯನಿಧಿ ಸ್ಟಾಲಿನ ಸನಾತನ ಧರ್ಮದ ಅವಹೇಳನವನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ ಖಂಡಿಸಿದರು.
ಸನಾತನ ಧರ್ಮದವನ್ನು ಡೆಂಗೆ, ಕೋವಿಡಗೆ ಹೋಲಿಸಿ ಆ ರೋಗಗಳನ್ನು ನಾಶ ಮಾಡಿದಂತೆ ಸನಾತನ ಧರ್ಮದವನ್ನು ನಾಶ ಮಾಡಬೇಕು ಎಂಬ ಹೇಳಿಕೆ ವಿವೇಚನೆ ಕಳೆದುಕೊಂಡ ಮತ್ತು ಅಹಂಕಾರದ ಪರಮಾವಧಿ ಎಂದರು.
ಸಾವಿರಾರು ವರ್ಷಗಳಿಂದ ದಾಳಿಕೋರರು, ಮತಾಂಧರು, ಅಕ್ರಮಣಕಾರರಾಗಿ ಬಂದು ನಾಶ ಮಾಡಲು ಪ್ರಯತ್ನಿಸಿದರು ನಾಶ ವಾಗದ ನಮ್ಮ ಭಾರತೀಯ ಸನಾತನ ಧರ್ಮ . ಕೇವಲ ಪ್ರಚಾರಕ್ಕಾಗಿ ಉದಯನಿಧಿ ಸ್ಟಾಲಿನ ಅವಹೇಳನೆ ಮಾಡಿದ್ಧಾರೆ. ಕೂಡಲೇ ಕ್ಷಮೆಯಾಚಿಸಬೇಕು. ಇಂತಹ ಅವಿವೇಕಿಗಳಿಗೆ ಸರಿಯಾದ ಪಾಠ ಕಳಿಸಬೇಕು ಎಂದು ಅಗ್ರಹಿಸಿದ್ದಾರೆ.