ಚಂದ್ರಶೇಖರ ಪಾಟೀಲ್​ ಕ್ರೀಡಾಂಗಣದಲ್ಲಿ ಹಾಕಿ, ಬಾಸ್ಕೆಟ್​ಬಾಲ್​ ಪಂದ್ಯಾಟ

PH 02
Published on

ಕಲಬುರಗಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಚಂದ್ರಕಾಂತ ಪಾಟೀಲ್ ಕ್ರೀಡಾಂಗಣದಲ್ಲಿ 17 ವರ್ಷದ ಒಳಗಿನ ಯುವಕ- ಯುವತಿಯರಿಗಾಗಿ ಬಾಸ್ಕೆಟ್ ಬಾಲ್ ಹಾಗೂ ಹಾಕಿ ಪಂದ್ಯಾಟ ಭಾನುವಾರ ಜರುಗಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಾಹಾಯಕ ನಿರ್ದೇಶಕಿ ಗಾಯಿತ್ರಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಆಟೋಟಗಳಲ್ಲಿ ಸೋಲು- ಗೆಲುವು ಸಾಮಾನ್ಯ. ಮಕ್ಕಳು ಮೊದಲು ಪಾಲ್ಗೊಳ್ಳುವುದನ್ನು ಕಲಿಯಬೇಕು. ಕ್ರೀಡಾ ಮನೋಭಾವ ಎಲ್ಲರಲ್ಲೂ ಇರಬೇಕು ಎಂದರು.

ಒಲಂಪಿಕ್ಸ್​ ಅಸೋಶಿಯೇಷನ್​ ಕಾರ್ಯದರ್ಶಿ ಅಶೋಕ್ ನಿಂಬೂರ, ಬಾಸ್ಕೆಟ್​ಬಾಲ್​ ತರಬೇತುದಾರ ಶಂಕರ್ ಸೂರೆ, ಹಾಕಿ ತರಬೇತುದಾರ ಸಂಜಯ್ ಬಾಣದ್, ಬಾಸ್ಕೆಟ್​ಬಾಲ್​ ಕೋಚ್​ ಪ್ರವೀಣ್​ ಕುಮಾರ್ ಪುಣೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುರೇಶ್ ಪವಾರ್, ಶಂಕರ್ ಕಲ್ಬುರ್ಗಿ, ಡಾ. ರವಿ ನಾಯಕ್, ಡಾ. ರಾಜಕುಮಾರ್ ಮಲ್ಕಪ್ಪಗೋಳ ಇತರರಿದ್ದರು.

ಬಾಸ್ಕೆಟ್​ಬಾಲ್​ನಲ್ಲಿ ಬಾಲಕರ ವಿಭಾಗದಲ್ಲಿ 12 ಹಾಗೂ ಬಾಲಕಿಯರ ವಿಭಾಗದಲ್ಲಿ 8 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net