

ಚಿಂಚೋಳಿ: ಕುಂಚಾವರಂ ಕಾಯ್ದಿಟ್ಟ ಅರಣ್ಯ ಪ್ರದೇಶದ ಒಡಲಲ್ಲಿನ ಶೇರಿಭಿಕ್ಕನಳ್ಳಿ ತಾಂಡಾ ಸ್ಥಳಾಂತರಕ್ಕೆ ಸಕಲ ಸಿದ್ಧತೆ ಕೈಗೊಳ್ಳಬೇಕು. ಸರ್ಕಾರದ ಸುತ್ತೋಲೆಯಂತೆ ಎಲ್ಲ ಇಲಾಖೆ ಅಧಿಕಾರಿಗಳು ಮಂಗಳವಾರ ಕಡ್ಡಾಯವಾಗಿ ತಾಂಡಾದಲ್ಲಿ ಹಾಜರಿದ್ದು, ಆಯಾ ಇಲಾಖೆ ಆಸ್ತಿ, ವಿಸ್ತಿರ್ಣ, ಜನಸಂಖ್ಯೆ, ಜಮೀನು, ನಿವೇಶನ, ಕುಟುಂಬದ ಸಂಖ್ಯೆಯೊಂದಿಗೆ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೂಚನೆ ನೀಡಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷÈ ವಹಿಸುವಂತಿಲ್ಲ. ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಶೇರಿಭಿಕ್ಕನಳ್ಳಿಯಲ್ಲಿ ಜರುಗುವ ಮಹತ್ವದ ಸಭೆಯಲ್ಲೂ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು.
ಈಗಾಗಲೇ ಅರಣ್ಯ ಇಲಾಖೆಯು ವೆಂಕಟಾಪುರ ಬಳಿ ಜನ ವಸತಿಗಾಗಿ ಸ್ಥಳ ಗುರುತಿಸಿದ್ದು, ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ. ಜನತೆ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದು, ತಾಲೂಕಿನ ಅಧಿಕಾರಿಗಳ ಕಾರ್ಯ ಮಹತ್ವದದ್ದಾಗಿದೆ. ಸರ್ಕಾರದ ಸಲಹೆ- ಸೂಚನೆ ಪಾಲಿಸಿ ಕಾರ್ಯ ಸನ್ನದ್ಧರಾಗಬೇಕು. ಎಂದರು.
ತಾಪA ಇಒ ಶಂಕರ ರಾಠೋಡ್, ಅಧಿಕಾರಿಗಳಾದ ಪ್ರಭುಲಿಂಗ, ಸವಿತಾ, ಡಾ. ಧನರಾಜ ಬೊಮ್ಮಾ, ವೆಂಕಟೇಶ ದುಗ್ಗನ್, ಡಾ. ಮಹ್ಮದ್ ಗಫಾರ್, ಸುಭಾಷ ಸುಲೇಪೇಟ, ನಾಗಶೆಟ್ಟಿ ಭದ್ರಶೆಟ್ಟಿ, ಕಾಶಿನಾಥ ಧನ್ನಿ ಇತರರಿದ್ದರು.