

ಕಲಬುರಗಿ; ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ.
ಸೇಡಂನಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದಲ್ಲಿ ತಗ್ಗು ಪ್ರದೇಶಗಳಿಗೆ ಅಪಾರ ಪ್ರಮಾಣದ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಸೇಡಂ ಪೊಲೀಸ್ ಠಾಣೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ನುಗ್ಗಿವೆ. ಸುಮಾರು 2 ಅಡಿಗೂ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿವೆ. ಪೀಠೋಪಕರಣಗಳು ಹಾಳಾಗಿದ್ದು, ಸಾಕಷ್ಟು ದಾಖಲೆಗಳು ನೀರು ಪಾಲಾಗಿವೆ.
ಆರಕ್ಷಕರು ದಿನ ನಿತ್ಯದ ಕೆಲಸ ಬಿಟ್ಟು, ಠಾಣೆಯಲ್ಲಿ ತುಂಬಿರುವ ನೀರನ್ನು ಹೊರ ಹಾಕುವ ಕೆಲಸ ಮಾಡುವುದರಲ್ಲಿಯೇ ತಲ್ಲೀನರಾಗಿದ್ದರು. ಇನ್ನು ಪೊಲೀಸ್ ಠಾಣೆಯ ಆವರಣ ಪುಟ್ಟ ಕೆರೆಯಂತೆ ಗೋಚರಿಸುತಿತ್ತು.