ಕಾವ್ಯಾಮೃತ ಸಂಕಲನಕ್ಕೆ ಕವಿತೆಗಳ ಆಹ್ವಾನ

PRABHAKAR JOShI
Published on

ಸೇಡಂ: ಕಲ್ಯಾಣ ಕರ್ನಾಟಕ ಪ್ರದೇಶ ಸ್ವಾತಂತ್ರö್ಯಗೊAಡು ಅಮೃತ ಮಹೋತ್ಸವ ಆಚರಿಸುವ ಅಂಗವಾಗಿ ನೃಪತುಂಗ ಅಧ್ಯಯನ ಸಂಸ್ಥೆಯು ಕಾವ್ಯಾಮೃತ ಹೆಸರಿನ ಕವನ ಸಂಕಲನ ಸಹಕಾರ ತತ್ವದಡಿ ಪ್ರಕಟಿಸಲಿದೆ ಎಂದು ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ ತಿಳಿಸಿದ್ದಾರೆ.

75ಜನ ರಚಿಸಿದ ಕವನಗಳ ಈ ಸಂಕಲನದಲ್ಲಿ ತಮ್ಮ ಕವನ ಇರಬೇಕೆಂದು ಅಪೇಕ್ಷಿಸುವ ಕವಿಗಳು ವಿಭಿನ್ನ ವಸ್ತುವಿನ ತಮ್ಮ ಎರಡು ಕವನಗಳನ್ನು ಸಂಸ್ಥೆಯ ಪದಾಧಿಕಾರಿಗಳಾದ ಸಿದ್ದಪ್ಪ ತಳ್ಳಳ್ಳಿ ಮೊ.9448104581, ಆರತಿ ಕಡಗಂಚಿ ಮೊ.9986100003, ಜಗದೀಶ ಕಡಬಗಾಂವ್ ಮೊ.9449309684, ಸಂತೋಷ ತೊಟ್ನಳ್ಳಿ ಮೊ.9972450288 ಅವರಿಗೆ ಕಳಿಸಬಹುದು.

ಕವನ ಕಳುಹಿಸುವರು ಸೇಡಂ ತಾಲೂಕಿನವರಾಗಿರಬೇಕು. ಸ್ವರಚಿತ ಎರಡು ಕವನಗಳನ್ನು ಸೆ.12ರ ಒಳಗಾಗಿ ತಮ್ಮ ಭಾವಚಿತ್ರ, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಕಳುಹಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net