ಭಂಕೂರ ಗ್ರಂಥಪಾಲಕಿ ಅಮಾನತು

PH 08
Published on

ಶಹಾಬಾದ್: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಹಾಗೂ ಕರ್ತವ್ಯಲೋಪ ಪ್ರಕರಣಕ್ಕೆ ಸಂಬAಧಿಸಿದAತೆ ಭಂಕೂರು ಗ್ರಂಥಾಲಯದ ಗ್ರಂಥಪಾಲಕಿ ಪಾರ್ವತಿ ಮಠಪತಿ ಅವರನ್ನು ಅಮಾನತು ಮಾಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಪಾರ್ವತಿ ಅವರು ಲೈಬ್ರರಿಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳ ಮುಂದೆ ಸಗಣಿಯ ಭರಣಿಗಳನ್ನು ಇಟ್ಟು, ಸಾಧಕರಿಗೆ ಅವಮಾನ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಲಕ್ಷಿö್ಮÃಕಾಂತ ಕಂದಗೂಳ ವಿಡಿಯೋ ಮತ್ತು ಪೋಟೊ ಸಮೇತ ತಾಪಂ ಇಒ ಅವರಿಗೆ ಲಿಖಿತ ದೂರು ನೀಡಿದ್ದರು. ಇದಲ್ಲದೆ ಚಿತ್ತಾಪುರ ತಾಪಂ ಇಒ ಅವರು ಲೈಬ್ರರಿಗೆ ಭೇಟಿ ನೀಡಿದಾಗ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದರು. ಅಲ್ಲದೆ ನಾಗರಾಜ ಎಂಬುವವರನ್ನು ನೇಮಕ ಮಾಡಿ, ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸಹಿ ಪೋರ್ಜರಿ ಮಾಡಿ ಜಿಲ್ಲಾ ಗ್ರಂಥಾಲಯಕ್ಕೆ ಶಿಫಾರಸು ಮಾಡಿದ್ದರು. ಕೆಕೆಆರ್‌ಡಿಬಿ ಅನುದಾನದಲ್ಲಿ ಗ್ರಂಥಾಲಯಕ್ಕೆ ನೀಡಿದ ಯುಪಿಎಸ್ ಬ್ಯಾಟರಿ ಮತ್ತು ಜೆರಾಕ್ಸ್ ಯಂತ್ರವನ್ನು ಬಳಕೆ ಮಾಡದೆ ಹಣ ಪೋಲು ಮಾಡಿದ್ದರು.

ಉz್ದೆÃಶಪೂರ್ವಕವಾಗಿಯೇ ಎರಡು ಬಾರಿ ಗ್ರಂಥಾಲಯದ ಬಯೋಮೆಟ್ರಿಕ್ ಹಾಳು ಮಾಡಿದ್ದರು. ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡದೆ ಸಂವಿಧಾನಕ್ಕೆ ಅಪಮಾನ ಮಾಡಿರುವುದ್ದರು. ಈ ಎಲ್ಲ ಆರೋಪಗಳಿಗೆ ಸಂಬAಧಿಸಿದAತೆ ಉತ್ತರ ನೀಡಲು ನೋಟಿಸ್ ನೀಡಲಾಗಿತ್ತು. ಆದರೆ ಇಲ್ಲಿವರೆಗೂ ಸರಿಯಾದ ಉತ್ತರ ನೀಡದಿರುವುದರಿಂದ ಸೇವೆಯಿಂದ ಅಮಾನತು ಮಾಡಿದ್ದಾರೆ. ಲೈಬ್ರರಿಯ ಕೀಲಿ ಕೈ ಅನ್ನು ಪಿಡಿಒ ರೇವಣಸಿದ್ದಪ್ಪ ಕಲಶೆಟ್ಟಿ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net