ಕಲಬುರಗಿಗಿಂದು ಶ್ರೀ ಸತ್ಯಾತ್ಮ ತೀರ್ಥರು

SATYATMA TEERTHARU
Published on

ಕಲಬುರಗಿ: ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಶನಿವಾರದಿಂದ ಜು.22ರವರೆಗೂ ನಗರದಲ್ಲಿದ್ದು, ಅಸಂಖ್ಯಾತ ಭಕ್ತರಿಗೆ ದರ್ಶನಾಶೀರ್ವಾದ ಹಾಗೂ ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಬ್ರಹ್ಮಪುರದ ಶ್ರೀ ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ವ್ಯವಸ್ಥಾಪಕ ವಿನೋದಾಚಾರ್ಯ ಗಲಗಲಿ ತಿಳಿಸಿದ್ದಾರೆ.

ಬ್ರಹ್ಮಪುರದ ಉತ್ತರಾದಿ ಮಠದಲ್ಲಿ ಶನಿವಾರ ಬೆಳಗ್ಗೆ 7.30ರಿಂದ 8.30ರವರೆಗೆ ಎಲ್ಲ ಪಾರಾಯಣ ಸಂಘಗಳಿAದ ಸಾಮೂಹಿಕ ಪಾರಾಯಣ, ಮಧ್ಯಾಹ್ನ 1ರಿಂದ 7ರವರೆಗೆ ಹೈದರಾಬಾದ್‌ನ ಶ್ರೀ ವೇದವ್ಯಾಸ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಮಗ್ರ ತರ್ಕ ತಾಂಡವ ಪರೀಕ್ಷೆ ಜರುಗಲಿದೆ. ಮದ್ರಾಧಾರಣೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಭಾನುವಾರ ಬೆಳಗ್ಗೆ 7.30ರಿಂದ ಎಲ್ಲ ಪಾರಾಯಣ ಸಂಘಗಳಿAದ ಸಾಮೂಹಿಕ ಪಾರಾಯಣ, 8ಕ್ಕೆ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಸಾಮೂಹಿಕ ಮುದ್ರಾಧಾರಣೆ, ಆಷಾಢ ಪೌರ್ಣಿಮಾ ಹಾಗೂ ಗುರುಪೂರ್ಣಿಮೆ ನಿಮಿತ್ತ ಶ್ರೀಗಳಿಂದ ಶ್ರೀ ರುಕ್ಮಿಣಿ ಪಾಂಡುರAಗ ದೇವರು ಹಾಗೂ ಯತಿಗಳ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಸೋಮವಾರ ಬೆಳಗ್ಗೆ 8ಕ್ಕೆ ಜೇವರ್ಗಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 9ಕ್ಕೆ ಬಸವೇಶ್ವರ ಕಾಲನಿ ರಾಯರ ಮಠದಲ್ಲಿ ಮುದ್ರಾಧಾರಣೆ ಜರುಗಲಿದೆ. ಭಕ್ತರು ಪಾಲ್ಗೊಂಡು ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಶೇಷ ಗುರುವಂದನೆ ನಾಳೆ: ಕಲಬುರಗಿಯ ನೂತನ ವಿದ್ಯಾಲಯ ಆವರಣದಲ್ಲಿನ ಶ್ರೀ ಸತ್ಯಪ್ರಮೋದ ಸಭಾಮಂಟಪದಲ್ಲಿ ಭಾನುವಾರ ಸಂಜೆ 6.30ಕ್ಕೆ ಉತ್ತರಾದಿ ಮಠ, ಶ್ರೀ ರುಕ್ಮಿಣಿ ವಿಠ್ಠಲ ಮಂದಿರ ಹಾಗೂ ವಿಶ್ವ ಮಧ್ವ ಮಹಾಪರಿಷತ್ ಜಿಲ್ಲೆ ಘಟಕದಿಂದ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರಿಗೆ ವಿಶೇಷ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುರುವಂದನೆ ರೂಪದಲ್ಲಿ 108 ಜನರಿಂದ ತಲಾ 2000 ರೂ. ಸಂಗ್ರಹಿಸಿ ಸಮರ್ಪಿಸಲು ಉz್ದೆÃಶಿಸಿದ್ದು, ಸೇವೆ ಸಲ್ಲಿಸುವವರು ರಾಮಮೂರ್ತಿ ಜೋಶಿ (ಮೊ.63609 50218), ಮೋಹನರಾವ್ ಕುಲಕರ್ಣಿ (ಮೊ.94803 39529) ಅವರನ್ನು ಸಂಪರ್ಕಿಸಹಬಹುದು ಎಂದು ರಾಮಾಚಾರ್ಯ ಘಂಟಿ, ವಿನೋದಾಚಾರ್ಯ ಗಲಗಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net