ಮಾಶಾಳ: ಸ್ಥಾಪಿಸಿದ ಸ್ಥಳದಲ್ಲೇ ಇರಲಿ ರಾಯಣ್ಣ ಮೂರ್ತಿ

PH 01
Published on

ಅಫಜಲಪುರ: ಮಾಶಾಳ ಗ್ರಾಮದಲ್ಲಿ 14ರ ರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸ್ಥಳ ಪಂಚಾಯಿತಿಗೆ ಸೇರಿದ್ದು, ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಬೀರಣ್ಣ ಕನಕ ಟೇಲರ್ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಗ್ರಾಮದ ಸರ್ವ ಸಮುದಾಯದವರು ಸೇರಿ ಸ್ಥಾಪಿಸಿದ್ದು, ಇಲ್ಲೇ ಮುಂದುವರಿಸಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ವಿಠ್ಠಲ್ ಜಗಲಗೊಂಡ, ಲಕ್ಷ್ಮೀಪುತ್ರ ಜಮಾದಾರ, ಸಿದ್ದರಾಮ ಹೊಸಮನಿ, ಬೀರಣ್ಣ ಪೂಜಾರಿ, ಅಮೋಘಿ ಪೂಜಾರಿ, ಸಿದ್ದು ವಠಾರ, ಇಸಾಕ್ ದಿವಟಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net