

ನಿಂಬರ್ಗಾ: ಇಂದಿನ ಆಧುನಿಕ ಜಗತ್ತಿನಲ್ಲಿ ಕಲುಷಿತ ಆಹಾರ ಸೇವನೆಯಿಂದ ಎಲ್ಲರೂ ಹಲವಾರು ಕಾಯಿಲೆಗಳಿಂದ ಬಳಲುತ್ತಿz್ದೆÃವೆ. ಸರ್ವ ಕಾಯಿಲೆಗಳಿಗೂ ಆಯುರ್ವೇದದಲ್ಲಿ ಪರಿಹಾರವಿದ್ದು, ರೋಗವನ್ನು ಬೇರು ಸಮೇತ ಹೊಗಲಾಡಿಸುತ್ತದೆ ಎಂದು ವೈದ್ಯಾಧಿಕಾರಿ ಡಾ. ಸ್ಮೀತಾ ಅಂಬೂರೆ ಹೇಳಿದರು.
ಮಾಡಿಯಾಳದ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ರಾಷ್ಟಿçÃಯ ಆಯುಷ್ ಅಭಿಯಾನದಡಿ ಹಿರಿಯ ನಾಗರಿಕರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ನಮ್ಮ ಆಹಾರ ಶೈಲಿಯಿಂದಲೇ ಇಂದು ಕಿರಿಯ ಹಿರಿಯರೆನ್ನದೆ ಎಲ್ಲರಿಗೂ ಬಿಪಿ, ಶುಗರ್‌ನಂತಹ ಹಲವು ಕಾಯಿಲೆಗಳು ಹರಡುತ್ತಿವೆ. ಹಿಂದಿನ ಕಾಲದಲ್ಲಿ ಯಾವುದೇ ರೋಗ ಬಂದರೂ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿ ನೀಡಲಾಗುತ್ತಿತ್ತು. ಇದರಿಂದಲೇ ಆರೋಗ್ಯವೂ ಸುಧಾರಣೆ ಆಗುತ್ತಿತ್ತು ಎಂದರು.
ಶ್ರೀ ಅವಧೂತಪ್ಪ ಮುತ್ಯಾ ಶಿಬಿರಕ್ಕೆ ಚಾಲನೆ ನೀಡಿದರು. ವೈದ್ಯರಾದ ಡಾ.ವೆಂಕಟರಡ್ಡಿ, ಡಾ.ಸೀಮಾ ವಿಭೂತಿ, ಯೋಗಾ ತರಬೇತಿದಾರ ಹಣಮಂತ್ರಾಯ ಶಿರೂರ, ಪ್ರಮುಖರಾದ ಸೌಂದರ್ಯ ದುತ್ತರಗಿ, ಶರಣಕುಮಾರ, ಅರುಣಕುಮಾರ ಪಾಟೀಲ್, ಶಿವರಾಯ ಮುತ್ಯಾ ವಡಿಯರ್, ಬಿ.ಜಿ.ಮಡ್ಡಿತೋಟ, ಬಸಣ್ಣ ಮುಂದಿನಕೇರಿ, ಶ್ರೀಶೈಲ ಕಲಶೆಟ್ಟಿ, ಸಿದ್ದಯ್ಯ ಸ್ವಾಮಿ, ಸದಾಶಿವ ಉಮದಿ, ಭೀಮಶಾ ನಡಗೇರಿ, ಗಂಗಾಧರ ಕಲಶೆಟ್ಟಿ ಇತರರಿದ್ದರು.