

ಕಲಬುರಗಿ: ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಡಿಎಂಕೆ ನಾಯಕ ಹಾಗೂ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಸದ ಡಾ. ಉಮೇಶ್ ಜಾಧವ್ ಕಿಡಿ ಕಾರಿದ್ದಾರೆ.
ಸನಾತನ ಧರ್ಮವನ್ನು ಡೆಂಗಿ, ಮಲೇರಿಯ ಹಾಗೆ ಕಾಯಿಲೆ ಇದೆ ಎಂದು ಹೇಳಿರುವುದು ಖಂಡನೀಯ. ಧರ್ಮದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಗಳು ಮಾತ್ರ ಹೀಗೆ ಮಾತಾಡಲು ಸಾಧ್ಯ ಎಂದು ಟೀಕಿಸಿದರು.
ಸ್ಟಾಲಿನ ಅವರದ್ದು ಅಘಾತಕಾರಿ ಹೇಳಿಕೆ. ಭಾರತದಿಂದ ಸನಾತನ ಧರ್ಮವನ್ನು ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ. ಶ್ರೇಷ್ಠ ಭಾರತದಲ್ಲಿ ಬದುಕಿ ಈ ರೀತಿ ಹೇಳಿಕೆ ಕೊಡಲು ನಾಚಿಕೆಯಾಗಬೇಕು. ನಮ್ಮದು ವೇದಿಕ್ ಭಾರತ. ಇಡೀ ವಿಶ್ವವೆ ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ. ಹೀಗಿರುವಾಗ ಅಜ್ಞಾನಿಯೊಬ್ಬ ನಮ್ಮ ಶ್ರೇಷ್ಠ ಧರ್ಮವನ್ನು ನಿಂದಿಸುತ್ತಿದ್ದಾನೆ ಎಂದು ಟೀಕಿಸಿದರು.
ಸ್ಟಾಲಿನ ಹೇಳಿಕೆಯನ್ನು ಕರ್ನಾಟಕದ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಬೆಂಬಲಿಸಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ.