ಕಲಬುರಗಿ; ಮಾಧವ ಗೋಶಾಲೆಯಲ್ಲಿ ಸಗಣಿ ತುಳಿಯುವ ಕಾರ್ಯಕ್ರಮ

PH 01
Published on

ಕಲಬುರಗಿ; ನಗರದ ಆಜಾದಪುರನಲ್ಲಿರುವ ಶ್ರೀ ಮಾಧವ ಗೋ ಶಾಲೆಯಲ್ಲಿ ಗೋವಿನ ಸಗಣಿ ತುಳಿಯುವ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಯಿತು.

ಶರಣೇಂದ್ರ ಪಾಟೀಲ್​ ದಂಪತಿ ಮೊದಲಿಗೆ ಗೋ ಪೂಜೆಯ‌ನ್ನು ನೆರವೇರಿಸಿದರು. ನಂತರ ಎಲ್ಲಾ ಗೋಭಕ್ತರು ಗೋಮಾತೆಯ ಪ್ರದಕ್ಷಿಣೆ ಹಾಕಿ ಸಗಣಿ ಎತ್ತಿ, ಸಾಮೂಹಿಕವಾಗಿ ಸಗಣಿ ತುಳಿದರು.

ಗೋವಿನ ಸಗಣಿಯಲ್ಲಿ ಅನೇಕ ಔಷಧಿ ಗುಣಗಳಿದ್ದು, ಸಗಣಿ ಸ್ಪರ್ಶಿಸುವುದರಿಂದ ಯಾವುದೇ ಚರ್ಮ ರೋಗ ಬರದಂತೆ ಗೋಮಾತೆ ನಮ್ಮನ್ನು ರಕ್ಷಿಸುತ್ತಾಳೆ. ಜೊತೆಗೆ ಶರೀರದಲ್ಲಿರುವ ವಿಷಕಾರಕ ಅಂಶಗಳನ್ನು ತೆಗೆದು ಹಾಕುವ ಅದ್ಭುತ ಶಕ್ತಿ ಗೋವಿನ ಸಗಣಿಗಿದೆ. ಈ ಕಾರಣಗಳಿಂದಾಗಿ ಇಂತಹ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆಯ ಪದಾಧಿಕಾರಿಗಳು ತಿಳಿಸಿದರು.

ನಂತರ ಎಲ್ಲಾ ಗೋಭಕ್ತರು ಗೋಶಾಲೆಯ ಪರಿಸರದಲ್ಲಿನ ನೀರಿನ ಕೊಳದಲ್ಲಿ ಈಜಾಡಿ ವಿಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net