

ಕಮಲಾಪುರ: ಮಗನ ಸಾವಿನಂದ ಬಹಳಷ್ಟು ನೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರುಕೋಟಾ ಬಳಿ ಬುಧವಾರ ಜರುಗಿದೆ.
ಕಲಬುರಗಿಯ ಘಾಟಗೆ ಲೇಔಟ್ನ ನಿವಾಸಿ ಸಿದ್ದಮ್ಮ ಬಸಪ್ಪ ಕೊಂಡಿ (82) ಆತ್ಮಹತ್ಯೆಗೆ ಶರಣಾದವಳು. ಆರು ತಿಂಗಳ ಹಿಂದೆ ಮಗ ಸಾವನ್ನಪ್ಪಿದ್ದ. ಇದರಿಂದ ಸಾಕಷ್ಟು ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು.
ಬುಧವಾರ ಬೆಳಗಿನ ಜಾವಾ ಕುರಿಕೋಟಾದ ಸೇತುವೆ ಬಳಿ ಬಂದಿದ್ದು, ನದಿಗೆ ಹಾರಿ ಮೃತಪಟ್ಟಿದ್ದಾಳೆ. ಈ ಕುರಿತು ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.