ಕಾಳಗಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ

PH 03
Published on

ಕಾಳಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ಗಳಲ್ಲಿನ ಸಮಸ್ಯೆಗಳ ಸಮಗ್ರ ಮಾಹಿತಿ ಪಡೆದು, ಹಂತ-ಹAತವಾಗಿ ಪರಿಹಾರ ಕಲ್ಪಿಸಲು ಶ್ರಮಿಸಲಾಗುವುದು ಎಂದು ಮುಖ್ಯಾಧಿಕಾರಿ ಪಂಕಜಾ ಎ. ಹೇಳಿದರು.

ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯಿAದ ಭಾನುವಾರ ಹಮ್ಮಿಕೊಂಡಿದ್ದ ವಾರ್ಡ್ 5, 6ರ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಹಲವು ವಾರ್ಡ್ಗಳಲ್ಲಿ ಸಾಮೂಹಿಕ ಶೌಚಗೃಹ, ಸ್ವಚ್ಛತೆ, ಶುದ್ಧ ಕುಡಿವ ನೀರು, ರಸ್ತೆ, ಅಸಮರ್ಪಕ ಚರಂಡಿ ಸೇರಿ ಇತರೆ ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಇರಲಿ ಎಂದರು.

ಭಾರತೀಯ ಕಿಸಾನ್ ಸಂಘದ ನಗರ ಘಟಕ ಅಧ್ಯP್ಷÀ ಭೀಮರಾಯ ಮಲಘಾಣ, 2ನೇ ವಾರ್ಡ್ನಲ್ಲಿ ಸಮರ್ಪಕ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕುರಿತು ಅರ್ಜಿ ಸಲ್ಲಿಸಿದರು. ಅಲ್ಲದೆ ಕೇವಲ ವೇದಿಕೆ ಕಾರ್ಯಕ್ರಮ ಮಾಡದೆ, ವಾರ್ಡ್ವಾರು ಸಂಚರಿಸಿ ಜನರ ನೋವನ್ನು ಆಲಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಹಿರಿಯ ಆರೋಗ್ಯ ನಿರೀP್ಷÀಣಾಧಿಕಾರಿ ಶಿವಶರಣಪ್ಪ ಮಾಕಪ್ಪನೋರ ಮಾತನಾಡಿದರು. ತಹಸೀಲ್ದಾರ್ ಘಮಾವತಿ ರಾಠೋಡ್, ಗ್ರೇಡ್-2, ತಹಸೀಲ್ದಾರ್ ರಾಜೇಶ್ವರಿ, ಪಪಂ ಸಮೂಹದ ವ್ಯವಹಾರಿಕ ಅಧಿಕಾರಿ ರೇಣುಕಾ ಕಾಬಾ, ಅಧಿಕಾರಿಗಳಾದ ಮಾಣಿಕ ಘತ್ತರಗಿ, ಆಕಾಶ, ಆನಂದ ಕಾಶಿ, ದತ್ತಾತ್ರೇಯ ಕಲಾಲï, ಕಾಳೇಶ್ವರ ಮಡಿವಾಳ, ಸಾಜಿದ್ ರಾಯಚೂರಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net