ಜಿಡಗಾ ಮಠದಲ್ಲಿ ಗುರುಪೂರ್ಣಿಮೆ ನಾಳೆ

PH 04
Published on

ಕಲಬುರಗಿ: ಆಳಂದ ತಾಲೂಕಿನ ಜಿಡಗಾದ ನವಕಲ್ಯಾಣ ಮಠದಲ್ಲಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ತಿಳಿಸಿದೆ.

ಬೆಳಗ್ಗೆ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಮಹಾರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಬಡ ಮಕ್ಕಳಿಂದ ಶ್ರೀಗಳ ಪಾದಪೂಜೆ, ಪುಷ್ಪ ಸಮರ್ಪಣೆ, ಸಹಸ್ರ ಬಿಲ್ವಾರ್ಚನೆ ಜರುಗಲಿದೆ. ಬಳಿಕ ಅಸಂಖ್ಯಾತ ಭಕ್ತರ ಮಧ್ಯೆ ಶ್ರೀಗಳೊಗೆ ಸುವರ್ಣ ಕಿರೀಟಧಾರಣೆ, ಉಚಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳ ವಿಶೇಷ ವಿಡಿಯೋ ಪ್ರಸಾರ ನಡೆಯಲಿದೆ. ಬಳಿಕ ಬಡ ಮಕ್ಕಳ ವಸತಿ ನಿಲಯ ಲೋಕಾರ್ಪಣೆ ಹಾಗೂ ಧರ್ಮ ಸಭೆ ಜರುಗಲಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ವಿವಿಧ ರಾಜ್ಯಗಳ ಅಪಾರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net