ಹಾವು ಕಡಿತದಿಂದ ರೈತ ಸಾವು

PH 09
Published on

ಜೇವರ್ಗಿ: ಹಾವು ಕಡಿತದಿಂದ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ರಾಜವಾಳ ಗ್ರಾಮದಲ್ಲಿ ಗುರುವಾರ ಜರುಗಿದೆ.

ರಾಜವಾಳದ ಬನ್ನಪ್ಪ ಬಸಣ್ಣ ಸಜ್ಜನ್ (50) ಮೃತ ರೈತ. ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಎಂದಿನAತೆ ಕೃಷಿ ಕಾರ್ಯಕ್ಕಾಗಿ ಜಮೀನಿಗೆ ಹೋಗಿದ್ದ, ಈ ವೇಳೆ ಹಾವು ಕಚ್ಚಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net