

ಕಲಬುರಗಿ: ಇಂದು ನಡೆದ ವೈದ್ಯಕೀಯ ಕೋಸ್೯ಗಳ ಪ್ರವೇಶಾತಿಯ ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಯಿಸಿ ಪರೀಕ್ಷೆಗೆ ಅನುಮತಿ ನೀಡಿದ ಘಟನೆ ಕಲಬುರಗಿ ನಗರದ ಸೆಂಟ್ ಮೇರಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದು, ಬ್ರಾಹ್ಮಣ ಸಮಾಜ ಆಕ್ರೋಶ ವ್ಯಕ್ತಪಡಿಸಿ, ದಿಢೀರ್ ಪ್ರತಿಭಟನೆ ನಡೆಸಿದೆ.
ಜಿಲ್ಲೆಯ ಚಿಂಚೋಳಿಯ ಶ್ರೀಪಾದ ಪಾಟೀಲ್ ಎಂಬ ವಿದ್ಯಾರ್ಥಿ ನೀಟ್ ಬರೆಯಲು ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ತಪಾಸಕರು ತಡೆದು ಜನಿವಾರ ತೆಗೆದು ಪರೀಕ್ಷೆ ಕೇಂದ್ರ ದೊಳಗೆ ಹೋಗು ಇಲ್ಲದಿದ್ದರೆ ಮರಳಿ ಹೋಗು ಎಂದಿದ್ದಾರೆ. ಕೊನೆಗೆ ವಿದ್ಯಾರ್ಥಿ ತನ್ನ ಭವಿಷ್ಯ ಮುಖ್ಯ ಎಂದು ತಿಳಿದು ಜನಿವಾರ ಕಳಚಿ ಪರೀಕ್ಷೆಗೆ ಹಾಜರಾಗಿದ್ದು, ಈ ಘಟನೆ ವ್ಯಾಪಕ ತಲ್ಲಣಗೊಳಿಸಿದೆ.
ಈ ಘಟನೆ ಗೊತ್ತಾಗುತ್ತಿದ್ದಂತೆ ಜಿಲ್ಲಾ ಬ್ರಾಹ್ಮಣ ಸಮಾಜದವರು ಪರೀಕ್ಷಾ ಕೇಂದ್ರದ ಆನಂದ ಹೋಟೆಲ್ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ಕೇಂದ್ರದ ರೈಲ್ವೇ ಸಚಿವ ಸೋಮಣ್ಣ ಅವರು ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಕಾಲುಂಗುರ, ತಾಳಿ ತೆಗೆಯುವಂತಿಲ್ಲ ಎಂದು ಹೇಳಿದ್ದರೂ ಕ್ಯಾರೇ ಎನ್ನದೇ ಜನಿವಾರ ತೆಗೆದಿರುವುದು ಶೋಷಣೆಯ ಪರಮಾವಧು ಎಂದು ಪ್ರತಿಭಟನಾಕಾರರು ಆಕ್ರೋಶ.