

ಕಲಬುರಗಿ: ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯನ ದೇವಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಶುಕ್ರವಾರ ಭೇಟಿ ನೀಡಿ, ವಿಶೇಷ ದರ್ಶನ ಪಡೆದರು.
ಬೆಳಗ್ಗೆ ದೇಗುಲಕ್ಕೆ ಆಗಮಿಸಿದ ಪಂಕಜಾ ಅವರಿಗೆ ದೇವಸ್ಥಾನ ಸಮಿತಿಯಿಂದ ಪೂರ್ಣಕುಂಭ ಸ್ವಾಹತ ಕೋರಲಾಯಿತು. ಪ್ರಧಾನ ಅರ್ಚಕರು ಮಂತ್ರಘೋಷಗಳೊಂದಿಗೆ ಸ್ವಾಗತಿಸಿದರು. ಬಳಿಕ ಶ್ರೀ ದತ್ತಾತ್ರೇಯನ ನಿರ್ಗಣ ಪಾದುಕೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಗುರು ಭೀಕ್ಷೆ ಸ್ವೀಕರಿಸಿ ಕೃತಾರ್ಥರಾದರು.
ಅರ್ಚಕರಾದ ವಿಜಯ್ ಪೂಜಾರಿ, ಪ್ರಿಯಾಕ್ ಪೂಜಾರಿ, ಪ್ರಸನ್ನ ಪೂಜಾರಿ, ಪ್ರಖ್ಯಾತ ಪೂಜಾರಿ, ಸಂತೋಷ್ ವಾದಗೆರೆ ಇತರರಿದ್ದರು.