ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮ

PH 03
Published on

ಚಿತ್ತಾಪುರ: ಸಮಾಜದ ಗುರುಗಳು ಹಾಗೂ ಪ್ರಮುಖರು ನಮ್ಮ ಮೇಲೆ ವಿಶ್ವಾಸವಿಟ್ಟು ಮಹಾಸಭೆಗೆ ಆಯ್ಕೆ ಮಾಡಿದ್ದು, ಎಲ್ಲರ ಸಲಹೆ- ಮಾರ್ಗದರ್ಶನದೊಂದಿಗೆ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.

ಬಸವೇಶ್ವರ ಗಂಜ್ ವರ್ತಕರ ಸಂಘದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಗಂಜ್ ವರ್ತಕರು ಯಾವಾಗಲೂ ಸಮಾಜದ ಏಳಿಗೆಗೆ ತನು, ಮನ, ಧನದಿಂದ ಸಹಕಾರ ನೀಡುತ್ತಿದ್ದಾರೆ. ನಿಮ್ಮ ಸಹಕಾರಕ್ಕೆ ನಾವು ಚಿರಋಣಿಯಾಗಿದ್ದು, ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಮನವಿ ಮಾಡಿದರು.

ನೂತನ ಪ್ರತಿನಿಧಿ ಶಾಂತಪ್ಪ ಚಾಳಿಕಾರ ಮಾತನಾಡಿ, ಎಲ್ಲ ಒಳಪಂಗಡಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು. ಎಲ್ಲರೂ ಒಂದಾದರೆ ಸಂಘಟನೆಗೆ ಬಲ ಬರುತ್ತದೆ. ಪಟ್ಟಣ, ಹಳ್ಳಿಗಳಲ್ಲಿ ಸಮಾಜದವರಿಗೆ ಅನ್ಯಾಯವಾದಗ ಎಲ್ಲರೂ ಸೇರಿ ಹೋರಾಡಬೇಕು. ವೀರಶೈವ ಸಮಾಜಕ್ಕೆ ನಾವಿz್ದೆÃವೆ ಎಂಬ ಸಂದೇಶ ರವಾನಿಸಬೇಕು. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸ್ವಂತ ಕಚೇರಿ, ಭವನ, ವಸತಿ ನಿಲಯ ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಮುಡಬೂಳ, ಕಾರ್ಯದರ್ಶಿ ಅನಿಲಕುಮಾರ ವಡ್ಡಡಗಿ, ಹಿರಿಯ ವರ್ತಕರಾದ ಶರಣಬಸಪ್ಪ ಯದಲಾಪುರ, ಚಂದ್ರಕಾAತ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಟೆಂಗಳಿ ಸಾತನೂರ, ಶರಣಪ್ಪ ಸಜ್ಜನ್, ಪ್ರಭುದೇವ ಬಮ್ಮನಳ್ಳಿ, ನಾಗರಾಜ ರೇಷ್ಮಿ, ವಿಶ್ವಾರಾಧ್ಯರೆಡ್ಡಿ ಪಾಟೀಲ್ ಕರದಾಳ, ಬಸವರಾಜ ಬಮ್ಮನಳ್ಳಿ, ಅಲೀಮ ಭಂಕಲಗಿ, ದಯಾನಂದ ಇಟಗಿ, ಮಹಾಂತೇಶ ಮರಗೋಳ, ರೇವಣಸಿದ್ದಪ್ಪ ರಾಜಾಪುರ ಇತರರಿದ್ದರು. ಗಂಜ್ ವರ್ತಕ ಸಿದ್ದಲಿಂಗ ಅನವಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net