

ಚಿತ್ತಾಪುರ: ಕಂದಾಯ ಇಲಾಖೆಯಿಂದ ಚಿತ್ತಾಪುರ, ಗುಂಡಗುರ್ತಿ, ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಆಯೋಜಿಸಿದ್ದ ಪೌತಿ/ ವಾರಸಾ ರೀತ್ಯಾ ಖಾತೆ ಆಂದೋಲನದಲ್ಲಿ ಒಟ್ಟು 69 ಅರ್ಜಿಗಳು ಸ್ವೀಕೃತವಾಗಿವೆ ಎಂದು ಕಂದಾಯ ನಿರೀಕ್ಷಕ ಮಧುಸೂಧನ ಘಾಳೆ ತಿಳಿಸಿದ್ದಾರೆ.
ಚಿತ್ತಾಪುರ ಹೋಬಳಿ ವ್ಯಾಪ್ತಿಯ ಮೊಗಲಾದಲ್ಲಿ 10, ಗುಂಡಗುರ್ತಿ ಹೋಬಳಿ ವ್ಯಾಪ್ತಿಯ ಮಲಕೂಡದಲ್ಲಿ 8, ನಾಲವಾರ ಹೋಬಳಿ ವ್ಯಾಪ್ತಿಯ ಇಂಗಳಗಿಯಲ್ಲಿ 25, ಅಳ್ಳೊಳ್ಳಿಯಲ್ಲಿ 8 ಹಾಗೂ ನಾಲವಾರದಲ್ಲಿ 18 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.