

ಚಿತ್ತಾಪುರ: ಭಕ್ತರ ಭಕ್ತಿ ಉನ್ನತವಾಗಿ ಬೆಳಯಲಿ, ಎಲ್ಲ ಭಕ್ತರಿಗೂ ಸುಂದರವಾದ ಬದುಕು ಲಭಿಸಲಿ ಎಂದು ದಿಗ್ಗಾಂವ್ ಪಂಚಗೃಹ ಹಿರೇಮಠದ ಪೀಠಾಧಿಪತಿ ಶ್ರೀ ಸಿದ್ಧವೀರ ಶಿವಾಚಾರ್ಯರು ನುಡಿದರು.
ಕಡಬೂರ ಬಡಾವಣೆಯ ಸಿದ್ಧೇಶ್ವರ ಪೆದ್ದು ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತರು ಗುರುವಿಗೆ ವಿಶೇಷ ಸ್ಥಾನ ನೀಡುತ್ತಾರೆ. ಭಕ್ತರ ಇಷ್ಟಾರ್ಥಗಳು ಈಡೇರಿಸುವಲ್ಲಿ ಗುರುಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಭಸ್ಮ, ರುದ್ರಾಕ್ಷಿ ಪ್ರತಿಯೊಬ್ಬರೂ ಧರಿಸಬೇಕು. ಇದರಿಂದ ಅವರ ಬದುಕು ಹಸನಾಗುತ್ತದೆ. ಭಕ್ತಿ ತೋರಿಕೆಗಾಗಿ ಇರಬಾರದು. ಗುರಿ ಸಾಧಿಸಲು ಗುರುವಿನ ಮಾರ್ಗ ಮುಖ್ಯವಾಗಿರುತ್ತದೆ ಎಂದರು.
ಸನ್ನತಿಯ ಜಗದೀಶ ಶಾಸ್ತಿç ಹಿರೇಮಠ ಪ್ರವಚನ ಹೇಳಿದರು. ಸಂಗಯ್ಯಸ್ವಾಮಿ ಸ್ಥಾವರಮಠ ಹೊನಗುಂಟಿ, ಶರಣಯ್ಯಸ್ವಾಮಿ ಮಠಪತಿ, ಆಶಾ ಭಜಂತ್ರಿ, ಗುರುರಾಜï ಪಾಟೀಲï ಹಂಗನಳ್ಳಿ ಸಂಗೀತ ಸೇವೆ ಸಲ್ಲಿಸಿದರು.
ಪ್ರಮುಖರಾದ ವಿಶ್ವರಾಜ ಜಗನ್ನಾಥ, ಶಿವನಾಗಪ್ಪ ಮುತ್ತಲಗಡ್ಡಿ, ಶರಣು ಬಮ್ಮನಳ್ಳಿ, ರಾಚಯ್ಯಸ್ವಾಮಿ ಬಟಗೇರಿ, ಮಲ್ಲಿಕಾರ್ಜುನ ಹೂಗಾರ, ಮಲ್ಲಿಕಾರ್ಜುನ ಗಂಗಾಣಿ, ಸರಸ್ವತಿ ರೇಷ್ಮಿ, ಹೀರಾಬಾಯಿ ಹತ್ತಿ, ಶಾರದಾ ಜಗನ್ನಾಥ, ತನುಜಾ ರೇಷ್ಮಿ, ಈರಮ್ಮ ಚನ್ನವೀರಪ್ಪ, ಲಲಿತಾ ರೇಷ್ಮಿ, ಬಸಮ್ಮ ಮಟ್ಟಿ, ಅನ್ನದಾನಿ ಯರಗಲ್, ಜಗದೇವಿ ಗಂಗಾಣಿ, ರಾಜೇಶ್ವರಿ ಸ್ವಾಮಿ ಇತರರಿದ್ದರು. ಶರಣು ಉಡಗಿ ಸ್ವಾಗತಿಸಿ, ನಿರೂಪಣೆ ಮಾಡಿದರು.