

ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಘಟಕದ ನೂತನ ಹೆಚ್ಚುವರಿ ಪದಾಧಿಕಾರಿಗಳು ಹಾಗೂ ನಗರ ಘಟಕದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ್ ಹೇಳಿದರು.
ಸಮಾಜದ ಸಂಘಟನೆಯ ಹಿನ್ನಲೆ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನೂತನವಾಗಿ ತಾಲೂಕು ಘಟಕಕ್ಕೆ ಶಿವಶರಣಪ್ಪ ಜಾಬಶೇಟ್ಟಿ, ಬಸವರಾಜ ಹೊಸಮನಿ, ಶಿವಬಸಯ್ಯ ಸ್ವಾಮಿ, ಬಸವರಾಜ ಪುಣ್ಯಶೇಟ್ಟಿ, ರವೀಂದ್ರ ಪಾಟೀಲ್, ಸಂಗಮೇಶ ಭೈರ್ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರ ಘಟಕಕ್ಕೆ ಶಿವರಾಜ ವಾಲಿ (ಗೌರವಾಧ್ಯಕ್ಷ), ಶಂಕರ ಶಿವಪುರಿ (ಅಧ್ಯಕ್ಷ), ಗುಂಡಯ್ಯ ಸ್ವಾಮಿ, ಸುರೇಶ ಸುಂಕದ, ಜಗನ್ನಾಥ ಸಾಲೇಬೀರನಳ್ಳಿ, ಮಾಂತಯ್ಯ ಸ್ವಾಮಿ, ಸೋಮಶೇಖರ ಮುಸ್ತರಿ, ರಮೇಶ ಜೊನಲ್ (ಉಪಾಧ್ಯಕ್ಷ) ಸಂಜುಕುಮಾರ ಪಾಟೀಲ್ ಯಂಪಳ್ಳಿ (ಪ್ರಧಾನ ಕಾರ್ಯದರ್ಶಿ), ಸಂಗಮೇಶ ಮೂಲಿಮನಿ, ಸಂತೋಷಕುಮಾರ ಕಶೆಟ್ಟಿ, ರವಿ ಐನೋಳ್ಳಿ, ಮಂಜುನಾಥ ಸ್ವಾಮಿ, ಸಂತೋಷ ಕಡಗದ (ಕಾರ್ಯದರ್ಶಿ), ಮಹೇಶ ದಾದಾಪುರ, ಶಾಂತವೀರ ತಾಂಡೂರಕರ, ಸಂತೋಷ ಪಾಟೀಲ್, ರಾಜಶೇಖರ ಹಿತ್ತಲ್, ಜಗನ್ನಾಥ ಸಾಲೇಬೀರನಳ್ಳಿ, ಚಂದ್ರಪ್ಪ ಪತ್ರಿ (ಸಹಕಾರ್ಯದರ್ಶಿ), ವಸಂತ ಇಟಗಿ, ಸತೀಶ ಪಲ್ಯೇದ್, ಸಚೇಂದ್ರ ಹದನೂರ, ಶಾಂತು ಯಂಪಳ್ಳಿ, ಬಸಯ್ಯ ಸ್ವಾಮಿ, ಮಹಾಂತೇಶ ಯಂಪಳ್ಳಿ, ಬಸವರಾಜ, ಗಣಪತಿ ಹೂಗಾರ, ಜೈಪ್ರಕಾಶ ತೋಟದ (ಸಂಘಟನಾ ಕಾರ್ಯದರ್ಶಿ), ರಾಜಶೇಖರ ಪೌಡಶೇಟ್ಟಿ (ಖಜಾಂಚಿ), ಹಣಮಂತ ಕೋರಿ (ಕಾರ್ಯಲಯ ಕಾರ್ಯದರ್ಶಿ) ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮಹಾಸಭೆ ಯುವ ಘಟಕದ ಅಧ್ಯಕ್ಷ ವೀರೇಶ ಯಂಪಳ್ಳಿ, ನೀಲಕಂಠ ಸೀಳಿನ್, ಸಂತೋಷ ಸುಂಕದ, ಶಂಕರ ಶಿವಪುರಿ ಇತರರಿದ್ದರು.