ಚಿಂಚೋಳಿ ತಾಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.80 ಮಳೆ ಕೊರತೆ

IMG-20230828-WA0013
Published on

ಚಿಂಚೋಳಿ; ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ 147 ಮಿ.ಮೀ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅಗಸ್ಟ್ ತಿಂಗಳಲ್ಲಿ ಶೇ.87 ಮಳೆ ಕೊರತೆಯಿಂದ ಮತ್ತೆ ಬೆಳೆ ಹಾನಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ವೀರಶೇಟ್ಟಿ ರಾಠೋಡ ಸಭೆಯಲ್ಲಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಂಟಿ ಸರ್ವೆ ನಡೆಸಲಾಗಿದ್ದು, ಅನುಬಂಧ 1ರಲ್ಲಿ ತಾಲೂಕಿನಲ್ಲಿ 3640 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ವರದಿ ಸಲ್ಲಿಸಲಾಗಿದೆ. ಇನ್ನು ಕಂದಾಯ, ಕೃಷಿ ಇಲಾಖೆ ಜಂಟಿ ಸರ್ವೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೂಡಲೇ ವರದಿ ಸಿದ್ಧಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಿ ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಇಲಾಖೆಯಿಂದ ವರದಿ ಸಲ್ಲಿಸುವಂತೆ ತಾ.ಪಂ ಇಓ ಶಂಕರ್ ರಾಠೋಡ ತಿಳಿಸಿದರು.

ಈ ವೇಳೆ ನರೇಗಾ ಯೋಜನೆ ಅಧಿಕಾರಿ ಶಿವಶಂಕ್ರಯ್ಯ ಸ್ವಾಮಿ, ಬಿಸಿ ಊಟ ಯೋಜನಾಧಿಕಾರಿ ಜಯಪ್ಪ ಚಾಪಲ್, ಡಾ.ಮಹ್ಮದ ಗಫಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net