ಚಿಂಚೋಳಿ; ಸಿಎಂಗೆ ರಾಜ್ಯಪಾಲರ ನೋಟಿಸ್ ಗೆ ಖಂಡನೆ

PH 04
Published on

ಚಿಂಚೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದನ್ನು ಖಂಡಿಸಿ ಹಿಂದುಳಿದ ಜಾತಿ ವರ್ಗಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕೋಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಅವಂಟಿ ಮಾತನಾಡಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯನ್ನು ಸಹಿಸದೆ ಕೆಲ ಕುತಂತ್ರಿಗಳ ಒತ್ತಡಕ್ಕೆ ಮಣಿದು, ಖಾಸಗಿ ವ್ಯಕ್ತಿಯ ದೂರಿನ ಮೇರೆಗೆ ಮುಖ್ಯಮಂತ್ರಿಗೆ ನೋಟಿಸ್ ನೀಡಿರುವುದು ದುರದೃಷ್ಟಕರ ಸಂಗತಿ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಕೂಡಲೇ ರಾಜ್ಯಪಾಲರು ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಹಣಮಂತ ಪೂಜಾರಿ, ಮುಖಂಡರಾದ ಮಾರುತಿ ಗಂಜಗೇರಾ, ರಾಮಶೆಟ್ಟಿ ಪವಾರ್, ಬ್ಲಾಕ್ ಕಾಂಗ್ರೇಸ್ ತಾಲೂಕು ಅಧ್ಯಕ್ಷ ಬಸವರಾಜ ಮಾಲಿ ಮಾತನಾಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಭಾಷ ರಾಠೋಡ್ ನೇತೃತ್ವದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರಮುಖರಾದ ಅಬ್ದುಲ್ ಬಾಸೀದ್, ಅನೀಲಕುಮಾರ ಜಮಾದಾರ, ಶರಣಪ್ಪ ಪಾಟೀಲ್, ಸಂತೋಷ ಗುತ್ತೇದಾರ್, ಗೋಪಾಲ ಗಾರಂಪಳ್ಳಿ, ಡಾ.ತುಕರಾಮ ಪವಾರ್, ಜಗನ್ನಾಥ ತೇಗಲತಿಪ್ಪಿ, ನರಸಿಂಹಲು ಸವಾರಿ, ಸುರೇಶ ಭಂಟಾ, ಅನ್ವರ್ ಖತೀಬ್, ಮಲ್ಲಿಕಾರ್ಜುನ ಮಡಿವಾಳ, ಜಗನ್ನಾಥ ಗುತ್ತೇದಾರ್, ಮತೀನ್ ಸೌದಾಗಾರ, ರವಿಕುಮಾರ ದಸ್ತಾಪುರ, ಗೋಪಾಲ ರಾಂಪೂರೆ, ಅಹ್ಮದ್ ಶಬ್ಬೀರ್, ಬಸವರಾಜ ಕಡಬೂರ, ಖಲೀಲ್ ಪಟೇಲ್, ರಾಮ್ಲು ಶಾದಿಪುರ, ರಾಮಚಂದ್ರ, ಗಂಗಾಧರ ಗಡ್ಡಿಮನಿ, ರಾಜಕುಮಾರ ಪೂಜಾರಿ, ಮಾಳಪ್ಪ ಪೂಜಾರಿ, ನಾಗಪ್ಪ ಯಲ್ಮಡಗಿ, ಸೋಮಶೇಖರ ಕರಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net