ಚಿಂಚೋಳಿ: ಶಾರ್ಟ್​ ಸರ್ಕೂಟ್,​ ಸುಟ್ಟು ಕರಕಲಾದ ವಾಹನ

PH 01
Published on

ಚಿಂಚೋಳಿ: ದಿಢೀರ್​ ಬೆಂಕಿ ಕಾಣಿಸಿಕೊಂಡು ವಾಹನವೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಲೂಕಿನ ನರನಾಳ ಗ್ರಾಮದ ಬಳಿ ಮಂಗಳವಾರ ಸಾಯಂಕಾಲ ಜರುಗಿದೆ.

ವಾಹನದಲ್ಲಿ ಪೀರು ಡ್ರೈವರ್, ಪ್ರೇಮ್, ರವಿ , ಲಕ್ಷ್ಮಣ, ರಾಜಪ್ಪ, ರವಿತಾ ಇದ್ದರು. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಚಿಂಚೋಳಿ ಪಿಎಸ್ಐ ಹಣಮಂತಪ್ಪ ಬಂಕಲಗಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net