ಚಿಂಚೋಳಿ: ಕನಕಪುರ - ಚಿಮ್ಮನಚೋಡ ಸಂಪರ್ಕ ಕಡಿತ

IMG-20230904-WA0010
Published on

ಚಿಂಚೋಳಿ: ಚಿಂಚೋಳಿ ತಾಲೂಕಿನಲ್ಲಿ ಶನಿವಾರದಿಂದ ನಿರಂತರ ಭಾರಿ ಮಳೆ ಸುರಿಯುತ್ತಿದ್ದೂ, ಇದರಿಂದ ಹಳ್ಳಕೊಳ್ಳ ಮೈದುಂಬಿ ಹರಿಯುತ್ತಿವೆ.

ಮಳೆಯಿಂದ ಹಳ್ಳ ತುಂಬಿ, ಕನಕಪೂರ -ಚಿಮ್ಮನಚೋಡ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕನಕಪೂರ ಬಳಿ ಹಳ್ಳ ಮೈದುಂಬಿ ಹರಿಯುತ್ತಿರುವ ಪರಿಣಾಮ ಸೇತುವೆಯ ಮೇಲೆ ನೀರು ಬಂದಿದ್ದು, ಸಂಚಾರ ಸ್ಥಗಿತಗೊಂಡಿದೆ.

ಚಿಂಚೋಳಿ ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇಷ್ಟು ದಿನ ಮಳೆ ಇಲ್ಲದೆ ಪರದಾಡಿದ ಜನ, ಈಗ ಬಾರಿ ಮಳೆಯಿಂದ ಮತ್ತೆ ಎದುರಾದ ಸಂಕಷ್ಟ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net