

ಚಿಂಚೋಳಿ; ಮೈದುಂಬಿ ಹರಿಯುತ್ತಿರುವ ಹಳ್ಳದಲ್ಲಿ ಹುಚ್ಚಾಟ ನಡೆಸುತ್ತಿದ್ದ ಯುವಕ ಕೊಚ್ಚಿ ಹೋಗಿ, ಬಳಿಕ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ತಾಲೂಕಿನ ದೋಟಿಕೊಳದಲ್ಲಿ ಸೋಮವಾರ ಜರುಗಿದೆ.
ಮಾರುತಿ ಹುಚ್ಚಾಟ ಮೆರೆದ ಯುವಕ. ನಿರಂತರ ಮಳೆಯಿಂದಾಗಿ ತಾಲೂಕಿನ ಬಹುತೇಕ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಅಲ್ಲದೆ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೋಟಿಕೋಳ ಗ್ರಾಮದಲ್ಲೂ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು. ಕುಡಿದ ಮತ್ತಿನಲ್ಲಿದ್ದ ಮಾರುತಿ, ಗ್ರಾಮಸ್ಥರ ಮಾತು ಕೇಳದೆ ಹಳ್ಳದಾಟಲು ಹೋಗಿದ್ದಾನೆ. ಹಳ್ಳದ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.
ಸುಮಾರು ನೂರು ಮೀಟರ್ ದೂರ ಸಂಚರಿಸಿದ್ದು, ನೀರಿನಲ್ಲಿ ಕೊಚ್ಚಿಕೊಂಡ ಹೋಗುವುದನ್ನು ನೋಡಿದ ಗ್ರಾಮಸ್ಥರು ಕಾಡು ಹಂದಿ ಹಿಡಿಯುವ ಬೇಲಿಯನ್ನು ತಂದು ಮಾರುತಿಯನ್ನು ರಕ್ಷಣೆ ಮಾಡಿದ್ದಾರೆ.