

ಚಿಂಚೋಳಿ: ಸುತ್ತ ಹಸಿರಿನ ವನಸಿರಿ, ಹಾಲಿನ ನೊರೆಯಂತೆ ಬೋರ್ಗರೆಯುವ ನೀರು, ಯುವಕರ ಬಿಂದಾಸ್ ಆಟ.. ಇದು ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಮಾಣಿಕಪುರ ಜಲಾಶಯದ ನೋಟ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಚಿಂಚೋಳಿ ವನ್ಯಜೀವಿಧಾಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಭರ್ಜರಿ ಮಳೆಯಿಂದ ಮಿನಿ ಮಲೆನಾಡಾಗಿ ಕುಂಚಾವರಂ ವನಸಿರಿ ನಿರ್ಮಾಣವಾಗಿದೆ.
13484 ಭೂ ಪ್ರದೇಶದಲ್ಲಿ ಕಾಡು ಹರಡಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ಅರಣ್ಯವೇ ಕಾಣಸಿಗುತ್ತದೆ. ಅರಣ್ಯದ ಒಡಲಲ್ಲಿನ ಕುಸರಂಪಳ್ಳಿ ಬಳಿಯ ಮಾಣಿಕಪೂರ ಜಲಪಾತವು ಹಾಲಿನ ತೋರೆಯಂತೆ ಭೋರ್ಗರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ನಿತ್ಯವೂ ಬೀದರ, ನೆರೆಯ ತೆಲಂಗಾಣದ ಜಹೀರಬಾದ, ತಾಂಡೂರ ಸೇರಿದಂತೆ ವಿವಿಧೆಡೆಯ ಪ್ರವಾಸಿಗರು ಅರಣ್ಯಕ್ಕೆ ಭೇಟಿ ನೀಡಿ ವನಸಿರಿಯ ಸೌಂದರ್ಯ ಸವಿಯುತ್ತಿದ್ದಾರೆ.