

ಚಿಂಚೋಳಿ: ಕುಂಚಾವರಂ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ 2ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗಡಿಯಲ್ಲಿ ಕನ್ನಡದ ಝೇಂಕಾರ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ತಾಲೂಕು ಕಾರ್ಯದರ್ಶಿ ಶಿವರಾಜ ವಾಲಿ ತಿಳಿಸಿದ್ದಾರೆ.
ಕುಂಚಾವರಂ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಂಜಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ ನೇತೃತ್ವ ವಹಿಸುವರು. ಶಾದಿಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಸಾಯಿಬಣ್ಣ ವಿಶೇಷ ಉಪನ್ಯಾಸ ನೀಡುವರು. ನಾಗಣ್ಣ ರಾಂಪುರೆ, ಗೋಪಾಲ ಯಂಪಳ್ಳಿ, ಮೋಹನ ಚವ್ಹಾಣ್, ಮೌಲಾನ ಪಟೇಲ್ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.