ಚಿಂಚೋಳಿ: ಜನತಾ ದರ್ಶನಕ್ಕೆ ಮಳೆ ಅಡ್ಡಿ

IMG-20230925-WA0017
Published on

ಚಿಂಚೋಳಿ: ತಾಲೂಕು ಕ್ರೀಡಾಂಗಣದಲ್ಲಿ ಜನತಾ ದರ್ಶನ ಆರಂಭವಾಗಿದ್ದು, ಮಧ್ಯಾಹ್ನ ವೇಳೆ ಮಳೆರಾಯನ ಪ್ರವೇಶವಾಗಿದ್ದು, ಜನರು ಸಮಸ್ಯೆ ಅನುಭವಿಸುವಂತಾಯಿತು.

ಜನತಾ ದರ್ಶನ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ಮಧ್ಯಾಹಾನ್ ಸುಮಾರು 2.30ಕ್ಕೆ ಧಾರಾಕಾರ ಮಳೆ ಸುರಿಯಲು ಆರಂಭಿಸಿತು. ಇದರಿಂದ ಜನರು ಸಮಸ್ಯೆ ಅನುಭವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಧಾರಣ ಟೆಂಟ್ ಅಳವಡಿಸಿದ್ದು, ಜನರು ಸಂಪೂರ್ಣ ವದ್ದೆಯಾದರು. ಬಹುತೇಕರು ಮಳೆಯಿಂದ ರಕ್ಷಣೆ ಪಡೆಯಲು ಕುರ್ಚಿಗಳನ್ನೇ ತಲೆಮೇಲೆ ಹೊತ್ತು ನಿಂತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net