ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

PH 01
Published on

ಚಿಂಚೋಳಿ: ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರೂ ಮೃತಪಟ್ಟ ಘಟನೆ ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.

ಕಲ್ಲಮ್ಮ ಬಸಪ್ಪ ಹೆಳವರ (35) ಮೃತ ಮಹಿಳೆ. ಕುರಿ ಮೇಯಿಸಲು ಹಳ್ಳದ ಕಡೆ ಹೋಗಿದ್ದು, ಇಲ್ಲೇ ವಿದ್ಯುತ್ ತಂತಿಯೊಂದು ಬಿದ್ದಿತ್ತು. ಇದನ್ನು ಗಮನಿಸದ ಕಲ್ಲಮ್ಮ, ತಂತಿಯನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೆಸ್ಕಾಂ, ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net