ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪತ್ನಿ ನಿಧನ, ಚಿಂಚೋಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

IMG-20230927-WA0007
Published on

ಚಿಂಚೋಳಿ: ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಪತ್ನಿ ಶಾರದಾ ಪಾಟೀಲ್ (97) ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದು, ಬುಧವಾರ ಪಾರ್ಥಿವ ಶರೀರ ಚಿಂಚೋಳಿಗೆ ತರಲಾಯಿತು.

ಬೆಳಗ್ಗೆ ಚಿಂಚೋಳಿಯ ಸ್ವಗೃಹದಲ್ಲಿ ಹಲವು ವಿಧಿ ವಿಧಾನ ನೆರವೇರಿಸಲಾಯಿತು. ಬಳಿಕ ಪಾರ್ಥಿವ ಶರೀರವನ್ನು ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಕ್ಷೇತ್ರದ ಜನತೆ ಗೌಡತಿ ದರ್ಶನ ಪಡೆದು ಕಣ್ತುಂಬಿಕೊಂಡು ಅಂತಿಮ ವಿದಾಯ ಹೇಳುತ್ತಿದ್ದಾರೆ.

ಪುತ್ರ, ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಪರಿವಾರ, ಕಾಂಗ್ರೆಸ್ ಮುಖಂಡರಾದ ಸುಭಾಷ್ ರಾಠೋಡ, ಬಾಬುರಾವ್ ಪಾಟೀಲ್, ಅನೀಲಕುಮಾರ ದೇವೀಂದ್ರಪ್ಪ ಜಮಾದಾರ, ರಾಜು ನಿಂಗದಳ್ಳಿ, ಶರಣು ಪಾಟೀಲ್, ಮಹಿಮೂದ ಪಟೇಲ್, ಬಸವರಾಜ ಮಾಲಿ ಸೇರಿದಂತೆ ಅನೇಕರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net