

ಚಿಂಚೋಳಿ: ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು, ಆದರೆ ವಾಸ್ತವ ಸ್ಥಿತಿ ಅರಿತು ಹೋರಾಟ ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರೀಯಾಂಕ ಖರ್ಗೆ ಹೇಳಿದರು.
ಚಿಂಚೊಳಿಯಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ವಿಚಾರದಲ್ಲಿ ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮುಂದೆ ಎಲ್ಲವು ಹೇಳಿದ್ದೇವೆ. ಹೀಗಿರುವಾಗ ಪ್ರತಿಭಟನೆ ಮಾಡೋದು ಸೂಕ್ತ ಅಲ್ಲ ಎಂದರು.
ನಾವು ನೀರು ಕೊಡೊದಕ್ಕೆ ಆಗೊದಿಲ್ಲ, ನಮಗೆ ಕುಡಿಯೋಕೆ ನೀರು ಇಲ್ಲಾ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದೇವೆ. ಲಿಖಿತ ರೂಪದಲ್ಲಿ ಕೋರ್ಟ್ಗೆ ದಾಖಲೆ ನೀಡಿದ್ದೆವೆ. ರೈತರ ಹಿತಾಸಕ್ತಿ ಕಾಪಾಡುವುದಕ್ಕೆ ಸರ್ಕಾರ ಎಲ್ಲ ರೀತಿಯಿಂದಲೂ ಶ್ರಮಿಸುತ್ತಿದೆ ಎಂದು ಹೇಳಿದರು.