

ಚಿಂಚೋಳಿ: ಪ್ರಮುಖ ಯೋಜನೆಯಾದ ಐನಾಪುರ ಏತ ನೀರಾವರಿಗೆ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಶ್ರೀ ಪಂಚಾಕ್ಷರಿ ದೇವರ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಐನಾಪುರದ ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಹಿರೇಮಠದ ಪಂಚಾಕ್ಷರಿ ಶ್ರೀ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನ ಬೇಡಿಕೆಗಳಿಗೆ ಸ್ಪಂದಿಸುವವರಿಲ್ಲದAತಾಗಿದೆ. ಕಳೆದ ಎರಡು ದಶಕಗಳಿಂದ ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಯಾರೊಬ್ಬರೂ ಗಮನಹರಿಸದಿರುವುದು ದುರಾದೃಷ್ಟಕರ. ರಾಜಕಾರಣಿಗಳು ವಿಧಾನಸೌಧದಲ್ಲಿ ಕುಳಿತು ಪೇಪರ್ ತಿನ್ನಲು ಸಾಧ್ಯವಿಲ್ಲ. ಅನ್ನ ಬೇಕು. ಹೀಗಾಗಿ ಅನ್ನ ನೀಡುವ ರೈತನ ಬೇಡಿಕೆಗೆ ಸ್ಪಂದಿಸಿ ಎಂದು ಆಗ್ರಹಿಸಿದರು.
ರಾಜಕಾರಣ ಬಿಟ್ಟು, ಈ ಭಾಗದ ರೈತರ ಏಳಿಗೆಗೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸ ಆಗಬೇಕಿದೆ. ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಸಾವಿರಾರು ಎಕರೆ ಬಂಜರು ಭೂಮಿ ನೀರಾವರಿಯಾಗಿ ಪರಿವರ್ತನೆಯಾಗುತ್ತವೆ. ರೈತರ ಕುಟುಂಬಗಳು ಸ್ವಾಲಂಬಿಗಳಾಗಿ ಜೀವಿಸುವಂತಾಗುತ್ತದೆ. ಹೀಗಾಗಿ ದಶಕಗಳ ಯೋಜನೆಯಾದ ಐನಾಪುರ ಏತ ನೀರಾವರಿಗೆ ಪಕ್ಷಾತೀತವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಐನಾಪುರ ಏತ ನೀರಾವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿಪಾಟೀಲ್ ಮಾತನಾಡಿದರು. ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ರಾಮಣ್ಣ ಮುಣಜಿ, ಕಲ್ಲಪ್ಪ ಮೇತ್ರಿ, ನಾಗಣ್ಣ ಹುಲಿ, ರಾಮಣ್ಣ ನಾಟೀಕಾರ, ಜಗನ್ನಾಥ ಮರಪಳ್ಳಿ, ರಾಜಕುಮಾರ ಮೂಡಗೂಳ, ನಾಗಶೇಟ್ಟಿ ಮಂದರಗಿ, ಭೀಮಶೆಟ್ಟಿ ಸಲಗರ, ಬಾಬುಮಿಯ್ಯ ತೇಲಿ, ಶಿವರಾಜ ನಾಟೀಕಾರ, ವೀರಶೆಟ್ಟಿ ದುಬಲಗುಂಡಿ, ವೀರಶೆಟ್ಟಿ ಯಲ್ಮಡಗಿ, ಮಾಣಿಕರಾವ ಕನಕಟ್ಟಾ, ಚಂದ್ರಕಾAತ ಐನಾಪುರ, ಮಲ್ಲಾರೆಡ್ಡಿ, ರಾಮಶೆಟ್ಟಿ ಖೋಠಾರ್, ಗೋರಕನಾಥ ಮಾಲು ಇತರರಿದ್ದರು.