ಚಿಂಚೋಳಿ; ಶರಣದ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಿ

PH 06
Published on

ಚಿಂಚೋಳಿ: ಮೊಬೈಲ್ ಎಂಬ ಮಹಾಮಾರಿಯಿಂದ ಯುವ ಪೀಳಿಗೆ ಹಾಳಾಗುತ್ತಿದ್ದು, ಪಾಲಕರು ಮೊಬೈಲ್ ಬಳಕೆಗೆ ಬ್ರೇಕ್ ಹಾಕಬೇಕು. ಸಾಧು, ಸಂತರ, ಶರಣರ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ್ ಹೇಳಿದರು.

ಚಿಮ್ಮನಚೋಡದ ಬಸವ ಪರುಷ ಕಟ್ಟೆಯ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ದೇವಾಸ್ಥಾನ ಟ್ರಸ್ಟ್ನಿಂದ ಶ್ರಾವಣ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶರಣರ ವಿಚಾರಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರವಚನಕಾರರಾದ ಶಿವಸ್ವಾಮಿ ಚಿನಕೇರಾ, ರಾಜಗುರುಸ್ವಾಮಿ ಮೈಂದರ್ಗಿ, ನೀಲಕಂಠ ಸೀಳಿನ್, ಪ್ರಮುಖರಾದ ಸುರೇಶ ದೇಶಪಾಂಡೆ, ಸಂಗ್ರಾಮ ಉಚ್ಚೇದ್, ಗುರುಲಿಂಗಯ್ಯ ಸ್ವಾಮಿ, ಸೂರ್ಯಪ್ರಕಾಶ ರಗಟೆ, ಚಂದ್ರಕಾAತ ಕೊಡಂಗಲ್, ಮಡಿವಾಳಪ್ಪ ರಗಟೆ, ಸಿದ್ದಲಿಂಗಪ್ಪ ದುಬಲಗುಂಡಿ, ಮಂಜುನಾಥ ದುಬಲಗುಂಡಿ, ಮಹೇಶಕುಮಾರ ಕೊಡಂಗಲ್, ವೀರಸಂಗಯ್ಯ ಸ್ವಾಮಿ, ವೀರೇಶ ಯಂಪಳ್ಳಿ, ಸುರೇಶ ಸುಂಕದ, ಸಂಜು ಯಂಪಳ್ಳಿ, ಭೀಮರಾವ ಗಣಾಪುರ, ಶಂಕರ ಶಿವಪುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net